ಮೋದಿ ಸರ್ಕಾರಕ್ಕೆ 3ರ ಸಂಭ್ರಮ- ಮಂಗ್ಳೂರು ಅಭಿಮಾನಿಯಿಂದ 1 ರೂ.ಗೆ ಆಟೋ ಸೇವೆ

Public TV
1 Min Read

ಮಂಗಳೂರು: ಮೋದಿ ನೇತೃತ್ವದ ಬಿಜೆಪಿ ಸರ್ಕಾರ 3 ವರ್ಷ ಪೂರೈಸಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿಯಾಗಿರೋ ಆಟೋ ಚಾಲಕರೊಬ್ಬರು 1 ರೂ.ಗೆ ಗ್ರಾಹಕರಿಗೆ ಪ್ರಯಾಣಿಸಲು ಆಫರ್ ನೀಡಿದ್ದಾರೆ.

ಮಂಗಳೂರು ನಿವಾಸಿ ಸತೀಶ್ ಪ್ರಭು (44) ಅವರೇ ಗ್ರಾಹಕರಿಗೆ ಈ ಬಂಪರ್ ಆಫರ್ ನೀಡಿದವರು. ದೇಶದಲ್ಲಿ ಮೋದಿ ಆಡಳಿತ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಂದ್ರೆ ಇಂದಿನಿಂದ ನಾಲ್ಕು ದಿನಗಳ ಕಾಲ ಆಟೋರಿಕ್ಷಾ ಪ್ರಯಾಣ ದರವನ್ನ 5 ಕಿ.ಮೀಗೆ 1 ರೂ. ನಂತೆ ನಿಗಡಿಪಡಿಸಿದ್ದಾರೆ.

ಸತೀಶ್ ಪ್ರಭು ತಮ್ಮ ಆಟೋ ರಿಕ್ಷಾದ ಹಿಂಭಾಗದಲ್ಲಿ ಈ ಬಗ್ಗೆ ಬ್ಯಾನರ್‍ವೊಂದನ್ನ ಹಾಕಿಕೊಂಡಿದ್ದಾರೆ. “ಮೋದಿ ಅವರು ದೇಶದಾದ್ಯಂತ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳಬೇಕೆಂದು ಬಯಸಿದೆ. ಅದಕ್ಕಾಗಿ ಪ್ರಯಾಣಿಕರಿಗೆ ದರವನ್ನ ಕಡಿಮೆ ಮಾಡಿದ್ದೇನೆ. 1 ರೂ. ಪ್ರಯಾಣದರದಿಂದ ಪ್ರಯಾಣಿಕರಿಗೆ ಸಹಾಯವಾಗಲಿದೆ. ಅದರಲ್ಲೂ ಮಧ್ಯಮ ವರ್ಗದವರು ಹಣ ಉಳಿತಾಯ ಮಾಡಬಹುದು ಎಂದು ಸತೀಶ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ನಮೋಬ್ರಿಗೆಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಈ ಫೋಟೋ ಹಂಚಿಕೊಂಡ ನಂತರ ಬಿಜೆಪಿ ವಲಯದಲ್ಲಿ ಈ ವಿಷಯ ಚರ್ಚೆಯಾಗ್ತಿದೆ.

ಸತೀಶ್ ಅವರು ಮೋದಿ ಮೇಲೆ ಅಭಿಮಾನ ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗ ಸುಮಾರು 150ಕ್ಕೂ ಹೆಚ್ಚು ಜನರಿಗೆ ಇದೇ ರೀತಿಯ ಆಫರ್ ನೀಡಿದ್ದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸತೀಶ್ ಅವರ ಈ ಕಾರ್ಯವನ್ನ ಶ್ಲಾಘಿಸಿದ್ದು, ಮೋದಿ ಅವರ ಜನಪ್ರಿಯತೆ ಎಲ್ಲಾ ವರ್ಗಗಳನ್ನು ಮೀರಿ ನಿಂತಿದೆ ಎಂಬುದನ್ನ ಇದು ತಿಳಿಸುತ್ತಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *