ಮಂಗಳೂರು: ಧನುರ್ಮಾಸ (Dhanurmasa) ಪೂಜೆಗೆ ಮುಂಜಾನೆ ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಕುವೆಟ್ಟು ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15) ಮೃತ ದುರ್ದೈವಿ. ಮುಂಜಾನೆ 4 ಗಂಟೆಗೆ ಪೂಜೆಗೆಂದು ದೇವಸ್ಥಾನಕ್ಕೆ ಬಾಲಕ ತೆರಳಿದ್ದ. ಮನೆಗೆ ವಾಪಸ್ ಬರದೇ ಇದ್ದಾಗ ಪೋಷಕರು ಎಲ್ಲೆಡೆ ವಿಚಾರಿಸಿದ್ದಾರೆ. ದೇವಸ್ಥಾನಕ್ಕೆ ಬಂದಿಲ್ಲ ಎಂದು ಮಾಹಿತಿ ಹಿನ್ನೆಲೆ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಬೀದರ್| ಬೈಕ್ನಲ್ಲಿ ತೆರಳುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆ ಸೀಳಿ ವ್ಯಕ್ತಿ ಸಾವು
ಮನೆಗೆ ಬರುವ ದಾರಿಯಲ್ಲಿ ಹುಡುಕಾಟದ ವೇಳೆ ರಕ್ತ ಚೆಲ್ಲಿರೋದು ಪತ್ತೆಯಾಗಿದೆ. ಬಳಿಕ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಹುಡುಕಾಡಿದಾಗ ಕೆರೆಯಲ್ಲಿ ಸುಮಂತ್ ಶವ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ಡಾ.ಅರುಣ್ ಕುಮಾರ್, ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

