ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ಮನೆದೇವ್ರು’ ನಟಿ ಅರ್ಚನಾ

By
1 Min Read

ಕಿರುತೆರೆ ನಟಿ ಅರ್ಚನಾ(Actress Archana) ಇದೀಗ ಮೊದಲ ಮಗುವಿನ(Baby) ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಕಲರ್‌ಫುಲ್ ಬೇಬಿ ಬಂಪ್ (Baby Bump) ಫೋಟೋಶೂಟ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಕುರಿತು ಫೋಟೋಗಳನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನಟಿ ಅರ್ಚನಾ ಮದುವೆಯಾದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಫಾರಿನ್‌ಲ್ಲಿದ್ರು ನಟಿ ಹಿಂದೂ ಪದ್ಧತಿಯನ್ನ ಫಾಲೋ ಮಾಡ್ತಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಹೈಲೆಟ್ ಆಗಿದ್ದಾರೆ.

ಲೈಟ್ ಹಸಿರು ಬಣ್ಣದ ಗೌನ್ ಧರಿಸಿ, ಪತಿ ಜೊತೆ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಅರ್ಚನಾ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

ಕೆಲ ವರ್ಷಗಳ ಹಿಂದೆ ವಿಘ್ನೇಶ್ ಶರ್ಮಾ (Vignesh Sharma) ಜೊತೆ ನಟಿ ಅರ್ಚನಾ ಮದುವೆಯಾದರು. ಗುರುಹಿರಿಯರ ಸಮ್ಮತಿಸಿದ ಮದುವೆಯಾಗಿತ್ತು. ಕಳೆದ ಜೂನ್‌ನಲ್ಲಿ ತಾವು ತಾಯಿಯಾಗ್ತಿರುವ ಗುಡ್ ನ್ಯೂಸ್ ನಟಿ ಹಂಚಿಕೊಂಡಿದ್ದರು. ಮನೆಗೆ ಆಗಮನವಾಗುತ್ತಿರೋ ಹೊಸ ಅತಿಥಿಗೆ ಈ ಜೋಡಿ ಕಾಯ್ತಿದೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

‘ಮಧುಬಾಲ’ (Madhubala) ಸೀರಿಯಲ್‌ನಲ್ಲಿ ವಿಲನ್ ಆಗಿ ಅರ್ಚನಾ ನಟಿಸಿದ್ದರು. ಬಳಿಕ ‘ಮನೆದೇವ್ರು’ (Mandevaru) ಸೀರಿಯಲ್‌ನಲ್ಲಿ ನಾಯಕಿಯಾಗಿ ಅರ್ಚನಾ ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ (Puneeth Rajkumar) ನಿರ್ಮಾಣದ ಸೀರಿಯಲ್ ಇದಾಗಿತ್ತು. ಪ್ರೋಮೋ ಶೂಟ್‌ನಲ್ಲಿ ಅರ್ಚನಾರನ್ನ ಪರಿಚಯಿಸಿದ್ದರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್