ಅನುಕಂಪ, ಮೋದಿ ಅಲೆಯಿಂದ ಸುಮಲತಾ ಗೆದ್ದಿದ್ದಾರೆ ಹೊರತು ಕೈ ಬೆಂಬಲದಿಂದಲ್ಲ – ರವೀಂದ್ರ ಶ್ರೀಕಂಠಯ್ಯ

Public TV
1 Min Read

ಮಂಡ್ಯ: ಈ ಬಾರಿಯ ಚುನಾವಣೆಯಲ್ಲಿ ಅಂಬರೀಶ್ ಸಾವಿನ ಅನುಕಂಪ, ಮೋದಿ ಸರ್ಕಾರದ ಬೆಂಬಲದಿಂದ ಸುಮಲತಾ ಗೆದ್ದಿದ್ದಾರೆ. ಅದನ್ನು ಬಿಟ್ಟರೆ ಕಾಂಗ್ರೆಸ್ಸಿಗರ ಬೆಂಬಲದಿಂದ ಸುಮಲತಾ ಗೆದ್ದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ನಮಗೂ ಮಂಡ್ಯದಲ್ಲಿ ರಕ್ಷಣೆ ಇಲ್ಲ ಎಂದು ಹೇಳಿಕೆ ನೀಡಿದ್ದ ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಟಾಂಗ್ ನೀಡಿದ ರವೀಂದ್ರ ಅವರು, ಹಾಗೆ ಯಾರಾದರೂ ಹೊಡೆಯಲು ಬಂದರೆ ನನಗೆ ತಿಳಿಸಲಿ ನಾನು ಭದ್ರತೆ ಕೊಡಿಸುತ್ತೇನೆ. ಅಗಲೇ ಮೂರು ಗನ್ ಮ್ಯಾನ್‍ಗಳು ಅವರ ಜೊತೆ ಇದ್ದಾರೆ ಬೇಕಾದರೆ ಇನ್ನೂ ಇಬ್ಬರನ್ನು ಕಳಿಸುತ್ತೇನೆ ಎಂದು ಹೇಳಿದರು.

ಕೇಂದ್ರಕ್ಕೆ ಸಂಬಂಧಿಸಿದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ರಾಜ್ಯ ಚುನಾವಣೆಯಲ್ಲಿ ಮತದಾರರು ಮೈತ್ರಿ ಸರ್ಕಾರದ ಪರ ಇದ್ದಾರೆ ಎನ್ನುವುದು ಸಾಬೀತಾಗಿದೆ. ಮೋದಿ ಪ್ರಭಾವಿ ವ್ಯಕ್ತಿ ಅವರ ನೇತೃತ್ವದಲ್ಲಿ ಬಿಜೆಪಿ ಅವರು ಆಪರೇಷನ್ ಕಮಲಕ್ಕೆ ಕೈ ಹಾಕಲ್ಲ ಎಂದುಕೊಂಡಿದ್ದೇನೆ. ಆಪರೇಷನ್ ಕಮಲ ಸತ್ಯಕ್ಕೆ ದೂರವಾದ ವಿಚಾರ ಆಪರೇಷನ್ ಕಮಲದ ಟೇಬಲ್ ತೆಗೆಯಲಾಗಿದೆ, ಲೈಟ್ ಆಫ್ ಆಗಿದೆ ಎಂದು ಟೀಕೆ ಮಾಡಿದರು.

ನಾನು ಜೆಡಿಎಸ್ ಶಾಸಕ ನನ್ನ ನಿಲುವು ಪಕ್ಷದ ಪರ ಹಾಗೂ ದೇವೇಗೌಡ ಮತ್ತು ಕುಮಾರಸ್ವಾಮಿ ಪರ ಇರುತ್ತದೆ. ಶ್ರೀರಂಗಪಟ್ಟಣ ಪುರಸಭೆ ಫಲಿತಾಂಶ ಜೆಡಿಎಸ್ ಪರ ಬಂದಿರೋದು ಸಂತಸ ತಂದಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಲು ಸ್ಥಳೀಯ ಸಂಸ್ಥೆ ಜೆಡಿಎಸ್ ಪರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *