ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ – ಲೈಕ್ಸ್‌ಗಾಗಿ ದೆವ್ವದ ಕಥೆ ಕಟ್ಟಿದ್ದವನಿಗೆ ಪೊಲೀಸರ ಕ್ಲಾಸ್

Public TV
1 Min Read

ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ಗಾಗಿ ದೆವ್ವದ (Ghost) ಫೇಕ್ ವಿಡಿಯೋ ಹಂಚಿಕೊಂಡಿದಾತನಿಗೆ ಮಂಡ್ಯ ಪೊಲೀಸರು (Mandya Police) ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌದು, ನಾಗಮಂಗಲದಲ್ಲಿ ಬೈಕ್ ಸವಾರನಿಗೆ ಕಾಣಿಸಿಕೊಂಡ ದೆವ್ವದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿ ಆ ರಸ್ತೆಯಲ್ಲಿ ದೆವ್ವ ಇದೆ ಎಂದು ಜನರು ಓಡಾಡಲು ಹೆದರುತ್ತಿದ್ದರು. ಈ ಬಗ್ಗೆ ಮಂಡ್ಯ ಪೊಲೀಸರು ಫ್ಯಾಕ್ಟ್‌ಚೆಕ್‌ ನಡೆಸಿದ್ದು, ಬಳಿಕ ವಿಡಿಯೋದ ಅಸಲಿಯತ್ತು ಬಯಲಾಗಿದೆ. ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

ನಾಗಮಂಗಲ ಟೌನ್ ನಿವಾಸಿಯಾಗಿರುವ ಗೋಪಿಯು ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ ಎಂಬ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋ ಅಸಲಿಯತ್ತು ತಿಳಿಯಲು ನಾಗಮಂಗಲ ಪೊಲೀಸರು ಫ್ಯಾಕ್ಟ್‌ಚೆಕ್‌ ಮಾಡಿದ್ದರು. ಈ ವೇಳೆ ಗೋಪಿಯು ಲೈಕ್ಸ್, ವೀವ್ಸ್‌ಗಾಗಿ ಫೇಕ್ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದೀಗ ಪೊಲೀಸರು ಯುವಕನ ತಪ್ಪೊಪ್ಪಿಗೆಯ ವಿಡಿಯೋ ಪೋಸ್ಟ್ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಫೇಕ್ ವಿಡಿಯೋಗಳನ್ನು ನಂಬಿ ಭಯಬೀಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Share This Article