ನಾನಿರೋ ವೇದಿಕೆಗೆ ಜೈಲಿಗೋದವ್ರನ್ನು ಹತ್ತಿಸ್ಬೇಡಿ: ನಾರಾಯಣ ಗೌಡ ಮತ್ತೆ ಎಡವಟ್ಟು

Public TV
1 Min Read

ಮಂಡ್ಯ: ಮಹಾರಾಷ್ಟ್ರಕ್ಕೆ ಜೈ ಹೇಳಿ ಭಾರೀ ವಿವಾದಕ್ಕೀಡಾಗಿದ್ದ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ನಾನಿರುವ ವೇದಿಕೆಗೆ ಜೈಲಿಗೋದವರನ್ನು ಹತ್ತಿಸಬೇಡಿ ಎಂದು ಕೆ.ಆರ್ ಪೇಟೆ ಮಡಿವಾಳ ಜನಾಂಗದ ತಾಲೂಕು ಅಧ್ಯಕ್ಷನನ್ನು ಸಚಿವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ನಾರಾಯಣಗೌಡರನ್ನ ಅಭಿನಂದಿಸಲೆಂದು ವೇದಿಕೆ ತಾಲೂಕು ಅಧ್ಯಕ್ಷ ಸಿದ್ದೇಶ್ ಮನೆಗೆ ಬಂದಿದ್ದರು. ತನಗೆ ಆಹ್ವಾನ ನೀಡಲು ಬಂದ ವೇಳೆ ಜೈಲಿಗೆ ಹೋದವರ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಎಂದ ಸಚಿವರು ಗರಂ ಆಗಿದ್ದಾರೆ. ಇದನ್ನೂ ಓದಿ: ಆಗಿರೋದು ಕರ್ನಾಟಕದ ಮಂತ್ರಿ, ಹೇಳಿದ್ದು ಮಹಾರಾಷ್ಟ್ರಕ್ಕೆ ಜೈ

”ಸಮುದಾಯದ ಗೌರವ ಕಳೆಯುವ ಹಾಗೆ ಮಾಡಬೇಡಿ. ನನ್ನ ಚೀಫ್ ಗೆಸ್ಟ್ ಆಗಿ ಹಾಕ್ಕೊಂಡು ಎಲ್ಲರನ್ನೂ ವೇದಿಕೆಗೆ ಹತ್ತಿಸಿದ್ರೆ ಗೌರವ ಇರುತ್ತಾ. ಕಳ್ಳರು, ಕಾಕರು, ಜೈಲಿಗೆ ಹೋದವರನ್ನು ಕರೆದ್ರೆ ಏನಪ್ಪ ಅರ್ಥ. ನೀನು ಕಾರ್ಯಕ್ರಮ ಮಾಡೋದಾದ್ರೆ ಮಾಡಿಕೋ. ನನ್ನದೇನೂ ಅಭ್ಯಂತರವಿಲ್ಲ. ಸಮುದಾಯ ನನ್ನ ಜೊತೆ ಇದೆ. ಸಮುದಾಯದ ಬಗೆಗೆ ನನಗೆ ಕೂಡ ಗೌರವ ಇದೆ. ನೀನು ಅಧ್ಯಕ್ಷನಾಗಿದ್ದೀಯಾ, ರಾಜಕೀಯ ಮಾಡುವುದಾದರೆ ಬೇರೆ ವೇದಿಕೆಯಲ್ಲಿ ಮಾಡಿಕೋ. ಬೇರೆ ರೀತಿಯಲ್ಲಿ ಮಾಡು. ಕಳ್ಳರು, ಕಾಕರು ಜೈಲಿಗೆ ಹೋಗಿರುವವರು ನಾನಿರುವ ವೇದಿಕೆಗೆ ಬಂದ್ರೆ ತಪ್ಪಾಗಲ್ವಾ. ಜೈಲಿಗೆ ಹೋದವರನ್ನೆಲ್ಲ ವೇದಿಕೆಗೆ ಹತ್ತಿಸಿದರೆ ಅದಕ್ಕೆ ಅರ್ಥವೇನು” ಎಂದು ರೇಗಾಡಿದ್ದಾರೆ.

ಫೆ.28 ರಂದು ಕೆಆರ್‍ಪೇಟೆಯಲ್ಲಿ ನಡೆದಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಪ್ರಕಾಶ್ ಜೆಡಿಎಸ್ ಮುಖಂಡ ದೇವರಾಜು ಹಾಗೂ ಇತರರು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮ ಕುರಿತು ಪ್ರಸ್ತಾಪ ಮಾಡಿರುವ ನಾರಾಯಣಗೌಡರು, ಅಂದು ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ ದೇವಕಿ ಹೊರತು ಪಡಿಸಿ ಉಳಿದವರೆಲ್ಲರೂ ನಾರಾಯಣಗೌಡ ವಿರೋಧಿಗಳಾಗಿದ್ದರು. ಹೀಗಾಗಿ ತಮ್ಮ ವಿರೋಧಿಗಳನ್ನ ಕಳ್ಳರು, ಕಾಕರು, ಜೈಲಿಗೆ ಹೋದವರೆಂದು ಹೇಳೊ ಮೂಲಕ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ:ಬಡ ಕುಟುಂಬದಿಂದ ಬಂದಿರೋ ನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ: ನಾರಾಯಣ ಗೌಡ

Share This Article
Leave a Comment

Leave a Reply

Your email address will not be published. Required fields are marked *