ಸಾವಿನಲ್ಲೂ ಒಂದಾದ ಕರುಳಬಳ್ಳಿ

Public TV
1 Min Read

ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿಯು ಕೂಡಾ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.

ಕುಶಾಲ್ (45) ಮೃತ ಮಗನಾಗಿದ್ದು, ನಿನ್ನೆ ಗ್ರಾಮದ ತಮ್ಮ ನಿವಾಸದಲ್ಲಿ ಕುಶಾಲ್ ಟಿವಿ ನೋಡುತ್ತಿರುತ್ತಾನೆ. ಈ ವೇಳೆ ಇದ್ದಕ್ಕಿದ್ದಂತೆ ಕುಶಾಲ್‍ಗೆ ಲೋ ಬಿಪಿಯಾಗಿ, ಕೆಳಗೆ ಬಿದ್ದು ಒದ್ದಾಡುತ್ತಿರುತ್ತಾನೆ. ಇದನ್ನು ಕಂಡ ಅಕ್ಕ-ಪಕ್ಕದ ಮನೆಯವರು ಕುಶಾಲ್‍ನ್ನು ಮನೆಯಿಂದ ಹೊರಗಡೆಗೆ ಕರೆದುಕೊಂಡು ಬರುತ್ತಾರೆ.

ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಶಾಲ್ ಕೊನೆಉಸಿರು ಬಿಡುತ್ತಾನೆ. ಮನೆಯ ಪಕ್ಕದಲ್ಲೇ ಇದ್ದ ಕುಶಾಲ್ ತಾಯಿ ಲಕ್ಷ್ಮಮ್ಮ (69) ಏನ್ ಆಯ್ತು ಎಂದು ಬಂದು ನೋಡುತ್ತಾರೆ. ಈ ವೇಳೆ ತನ್ನ ಮಗ ಸಾವನ್ನಪ್ಪಿರುವ ದೃಶ್ಯ ಕಂಡು ಲಕ್ಷ್ಮಮ್ಮಗೆ ಹೃದಯಾಘಾತವಾಗಿ, ಬಳಿಕ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ಕರಳು ಮತ್ತು ಬಳ್ಳಿ ಒಂದಾಗಿವೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Share This Article
Leave a Comment

Leave a Reply

Your email address will not be published. Required fields are marked *