ಕಲಿಯುಗದ ಕರ್ಣನಿಗೂ ಮಂಡ್ಯದ ವಿವಿ ಸ್ಟೇಡಿಯಂಗೂ ಅವಿನಾಭಾವ ಸಂಬಂಧ

Public TV
1 Min Read

ಮಂಡ್ಯ: ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇರಿಸಲಾಗಿದೆ. ಇದೇ ಕ್ರೀಡಾಂಗಣಕ್ಕೂ ಮತ್ತು ಅಂಬರೀಶ್ ಅವರಿಗೂ ಅವಿನಾಭಾವ ಸಂಬಂಧವಿದೆ. ಅಂಬಿಯ ರಾಜಕೀಯ ಹಾಗು ಸಿನಿಮಾರಂಗದ ಏಳಿಗೆಗೆ ಇದೇ ಕ್ರೀಡಾಂಗಣ ಸಾಕ್ಷಿಯಾಗಿತ್ತು.

1994ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸಮ್ಮುಖದಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶಲ್ಲಿ ಅಂಬರೀಶ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. 2002ರಲ್ಲಿ 50ನೇ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳ ಜೊತೆಯಲ್ಲಿ ಇಲ್ಲಿಯೇ ಮಾಡಿಕೊಂಡಿದ್ದರು. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ರಾಹುಲ್ ಗಾಂಧಿ ನೇತೃತ್ವದಲಿ ಇಲ್ಲೇ ಬಹಿರಂಗ ಸಮಾವೇಶ ಆಯೋಜಿಸಿ ಪ್ರಚಾರ ನಡೆಸಿದ್ದರು. ಇದನ್ನೂ ಓದಿ: ವ್ಯಕ್ತಿ ಸತ್ತಾಗ ನೋಡದನ್ನ, ಬದುಕಿದ್ದಾಗ ನೋಡಿದವ ನಾನು ಪುಣ್ಯವಂತ

ಮೂರು ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಂಡ್ಯ ಜಿಲ್ಲೆಯ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ್ದರು. 2008 ರಲ್ಲಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೇ ಕ್ರೀಡಾಂಗಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಪ್ತ ಗೆಳೆಯ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನ ಇದೇ ಸ್ಟೇಡಿಯಂನಲ್ಲಿ ಆಚರಿಸಿದ್ದರು. ಇದನ್ನೂ ಓದಿ: ಅಂಬಿಯನ್ನು ಮದ್ವೆಗೆ ಒಪ್ಪಿಸಿದ್ದು ಹೇಗೆ? ಡಿಕೆ ಶಿವಕುಮಾರ್ ನೆನಪು ಮೆಲಕು

ಈಗ ಅಂತಿಮ ಕಾರ್ಯಕ್ರಮದಲ್ಲಿ ಪಾರ್ಥೀವ ಶರೀರವಾಗಿ ಇದೇ ಕ್ರೀಡಾಂಗಣದಲ್ಲಿ ಅಂಬರೀಶ್ ಭಾಗಿಯಾಗಿದ್ದಾರೆ. ಮಂಡ್ಯದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಮೃತದೇಹವನ್ನು ಮತ್ತೆ ಬೆಂಗಳೂರಿಗೆ ತರಲಾಗುವುದು. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

https://www.youtube.com/watch?v=E1eeCqAkbf0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *