ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈದ್ ಮಿಲಾದ್‍ಗೆ ಕಡ್ಡಾಯ ರಜೆ ಬ್ಯಾನರ್: ವ್ಯಾಪಕ ಆಕ್ರೋಶ

By
2 Min Read

ಮಂಗಳೂರು: ಮೀನುಗಾರಿಕಾ ಬಂದರ್ ನಲ್ಲಿ ವಿವಾದಾತ್ಮಕವಾಗಿ ಹಾಕಿದ ಬ್ಯಾನರೊಂದರಿಂದ ಇದೀಗ ವಿವಾದ ಸೃಷ್ಟಿಯಾಗಿದೆ. ಸೆ.28 ರಂದು ನಡೆಯಲಿರುವ ಈದ್ ಮಿಲಾದ್ (Eid Milad) ಹಬ್ಬದಂತು ಇಡೀ ಮೀನುಗಾರಿಕಾ ಬಂದರ್ ಕಡ್ಡಾಯವಾಗಿ ರಜೆ ಮಾಡಬೇಕು ಎಂದು ಹಸಿ ಮೀನು ವ್ಯಾಪಾರಿಗಳ ಸಂಘ ಬ್ಯಾನರ್ ಹಾಕಿದೆ.

ಸೆ.28 ರ ಮುಂಜಾನೆ 3.45 ರ ನಂತರ ಯಾರೂ ಮೀನುಗಾರಿಕಾ ಬಂದರ್ (Fishing Port) ನಲ್ಲಿ ಯಾವುದೇ ವಹಿವಾಟು ನಡೆಸಬಾರದು. ಒಂದು ವೇಳೆ ವ್ಯಾಪಾರ ಮಾಡಿದ್ರೆ ಒಂದು ತಿಂಗಳ ಕಾಲ ಆ ವ್ಯಕ್ತಿಗೆ ಬಹಿಷ್ಕಾರ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ಬ್ಯಾನರ್ ನಲ್ಲಿ ಹಾಕಲಾಗಿತ್ತು. ಈ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಮುಸ್ಲಿಮರೇ ಹೆಚ್ಚಿರುವ ಬಂದರ್ ನಲ್ಲಿ ಹಿಂದೂ ಮೀನುಗಾರರಿಗೆ ಬೆದರಿಕೆ ಹಾಕಲಾಗಿದೆ.

ಇದು ಸರಿಯಲ್ಲ ಎಂದು ಟೀಕೆ ವ್ಯಕ್ತವಾಗಿತ್ತು. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಕೂಡಾ ಈ ಬ್ಯಾನರ್ ನನ್ನು ಪ್ರಶ್ನಿಸಿದ್ದು, ಕಡ್ಡಾಯ ರಜೆ ಹಾಗೂ ದಂಡ ವಿಧಿಸಲು ಬಂದರ್ ನಲ್ಲಿ ಷರಿಯತ್ ಕಾನೂನು ಜಾರಿಯಲ್ಲಿರೋದಾ? ಇವರ ಬೆದರಿಕೆಗೆ ಹಿಂದೂ ಮೀನುಗಾರರು ಮಣಿಯಬಾರದು, ನಿಮ್ಮೊಂದಿಗೆ ಇಡೀ ಹಿಂದೂ ಸಮಾಜ ಇದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಬಂದ್ ಬಿಸಿ ನಡುವೆ ಮಂಗಳವಾರ CWRC ಸಭೆ – ಮತ್ತೆ ನೀರು ಹರಿಸಲು ಸೂಚಿಸುತ್ತಾ ನಿಯಂತ್ರಣ ಸಮಿತಿ?

ಈ ನಡುವೆ ಬ್ಯಾನರ್ ಬಗ್ಗೆ ಹಸಿ ಮೀನು ಸಂಘಟನೆಯ ಮುಖಂಡರು ಸ್ಪಷ್ಟೀಕರಣ ನೀಡಿದ್ದು, ಹಿಂದೂ-ಮುಸ್ಲಿಂ-ಕ್ರೈಸ್ತರ ಧಾರ್ಮಿಕ ಹಬ್ಬಕ್ಕೆ ಬಹಳ ವರ್ಷದಿಂದಲೂ ಕಡ್ಡಾಯ ರಜೆ ಇದೆ. ಹಿಂದೂಗಳ ಮೂರು, ಮುಸ್ಲಿಂಮರ ಮೂರು ಹಾಗೂ ಕ್ರೈಸ್ತರ ಎರಡು ಹಬ್ಬಗಳಿಗೆ ಕಡ್ಡಾಯ ರಜೆ ಇದೆ. ಎಲ್ಲರೂ ಸೌಹಾರ್ದಯುತವಾಗಿ ವ್ಯಾಪಾರ ಮಾಡುತ್ತಿದ್ದೇವೆ. ಇದನ್ನು ದೊಡ್ಡ ವಿವಾದ ಮಾಡುವುದು ಬೇಡ. ಕಳೆದ ಗಣೇಶ ಚತುರ್ಥಿಯಂದು ಕೆಲವರು ಕದ್ದುಮುಚ್ಚಿ ಮೀನು ವ್ಯಾಪಾರ ಮಾಡಿರೋದ್ರಿಂದ ಮುಂದಿನ ಈದ್ ಮಿಲಾದ್ ಗೆ ಮರುಕಳಿಸ ಬಾರದೆಂದು ಈ ಬ್ಯಾನರ್ ಹಾಕಲಾಗಿದೆ. ಇದೀಗ ವಿವಾದ ಆಗಿರೋದ್ರಿಂದ ಮೂರು ಧರ್ಮದ ಎಂಟು ಹಬ್ಬಗಳ ಕಡ್ಡಾಯ ರಜೆಯ ವಿವರವನ್ನು ಹಾಕಲು ಸಂಘ ನಿರ್ಧರಿಸಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್