ನವದೆಹಲಿ: ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ. ಇದರಿಂದ ನಿಜಕ್ಕೂ ಬೇಸರವಾಗಿದೆ. ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ ಎಂದು ನಟಿ ಮಂದನಾ ಕರಿಮಿ (Mandana Karimi) ತಿಳಿಸಿದ್ದಾರೆ.
ರಿಯಾಲಿಟಿ ಶೋ ಬಿಗ್‌ಬಾಸ್ 9ರ ಮೂಲಕ ಖ್ಯಾತಿ ಪಡೆದಿದ್ದ ಇರಾನ್ ಮೂಲದ ನಟಿ ಮಂದನಾ ಕರಿಮಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಇರಾನ್ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದ ನನ್ನನ್ನುಇಲ್ಲಿನ ಜನ ನನ್ನನ್ನು ತುಚ್ಛವಾಗಿ ಬಿಂಬಿಸಿದೆ. ಹೀಗಾಗಿ ಇರಾನ್ ಆಡಳಿತ ಬದಲಾದ ತಕ್ಷಣ ಭಾರತವನ್ನು ತೊರೆಯುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Iran War| ಭಾರತಕ್ಕೆ ಕಚ್ಚಾ ತೈಲ ಪೂರೈಸಲು ನಾವು ಸಿದ್ಧ: ರಷ್ಯಾ
ಮುಂದಿನ ಆಡಳಿತದಲ್ಲಿ ಇರಾನ್‌ನಲ್ಲಿ ಮಹಿಳೆಯರು ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಧರಿಸಬಹುದು, ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಅಧ್ಯಯನ ಮಾಡಬಹುದು. ಮಹಿಳೆಯರು ಸ್ವಾತಂತ್ರ್ಯವಾಗಿ, ಅವಕಾಶಗಳಿಗೆ ವಂಚಿರಾಗದೇ ಬದುಕಬಹುದು. ಮಧ್ಯಪ್ರಾಚ್ಯದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತಾ ಜನರಿಗೆ ಬೆದರಿಕೆ ಹಾಕದೇ ಮಧ್ಯಪ್ರಾಚ್ಯವನ್ನು ನಿರ್ಮಿಸುವ ರಾಷ್ಟ್ರವಾಗಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ ಭಾರತವನ್ನು ತೊರೆಯಲು ಸಿದ್ಧಳಾಗಿದ್ದೇನೆ. ಚಿಕ್ಕವಳಿದ್ದಾಗ ಭಾರತಕ್ಕೆ ಬಂದಿದ್ದೆ. ಇದೀಗ ತುಂಬಾ ಕಷ್ಟವಾಗುತ್ತಿದೆ. ಈ ದೇಶ ನನಗೆ ಎಲ್ಲವನ್ನೂ ನೀಡಿದೆ. ಮಾಡೆಲಿಂಗ್, ನಟನೆ, ಪ್ರೀತಿ, ಸ್ನೇಹಿತರು ಎಲ್ಲವನ್ನೂ ನೀಡಿ, ನನ್ನನ್ನು ಬೆಳೆಸಿದೆ. ಆದರೆ ಇದೀಗ ಭಾರತದಲ್ಲಿ ನನಗೆಂದು ಧ್ವನಿಯೆತ್ತಿ ಮಾತನಾಡುವವರಿಲ್ಲ ಎಂದೆನಿಸಿದೆ. ಇರಾನ್ ಆಡಳಿತದ ವಿರುದ್ಧ ಮಾತನಾಡಿದ ನಂತರ ಮುಂಬೈನಲ್ಲಿ ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಆದರೆ ಒಂದು ರೀತಿಯಲ್ಲಿ ಇಲ್ಲಿನ ತುಚ್ಛವಾಗಿ ನಿಂದಿಸಿ, ನಡು ನೀರಲ್ಲಿ ಕೈಬಿಟ್ಟಂತಾಗಿದೆ. ಇದರಿಂದ ನಿಜಕ್ಕೂ ಬೇಸರವಾಗಿದೆ. ಅದಕ್ಕೆ ಇರಾನ್‌ಗೆ ಹೋಗಲಿದ್ದೇನೆ ಎಂದಿದ್ದಾರೆ.
ಇದಕ್ಕೂ ಮುನ್ನ ಯುಎಸ್-ಇರಾನ್ ಯುದ್ಧದ ಬಗ್ಗೆ ಮಾತನಾಡಿದ್ದ ಕರಿಮಿ, ಇರಾನ್‌ನ ಪ್ರಸ್ತುತ ಆಡಳಿತವನ್ನು ಮಧ್ಯಪ್ರಾಚ್ಯದ ಕ್ಯಾನ್ಸರ್ ಕೋಶವಾಗಿದೆ. ಬದಲಾವಣೆಗಾಗಿ ಈ ಹೋರಾಟ ನಡೆಯುತ್ತಿದೆ ಎಂದಿದ್ದರು. ಭಾರತೀಯ ಸೆಲೆಬ್ರಿಟಿಗಳಾದ ಅಜಿತ್ ಕುಮಾರ್, ವಿಷ್ಣು ಮಂಚು, ಸೋನಾಲ್ ಚೌಹಾಣ್ ಸೇರಿದಂತೆ ಹಲವರು ಯುಎಇಯಲ್ಲಿ ಸಿಲುಕಿಕೊಂಡಿರುವ ವೇಳೆ ಕರಿಮಿ ಈ ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: ಟೆಹ್ರಾನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ – ಕೆಲವರು ಅಲ್ಲೇ ಉಳಿಯಲು ಇಚ್ಛಿಸಿದರು: ರಾಯಭಾರ ಕಚೇರಿ

