ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

Public TV
1 Min Read

ಬೆಂಗಳೂರು: ಇಸ್ರೋದ (ISRO) ಕೇಂದ್ರ ಕಚೇರಿ ಇರುವ ಬೆಂಗಳೂರು (Bengaluru) ಚಂದ್ರಯಾನ -3ರ (Chandrayaan-3) ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ರಾಕೆಟ್, ನೌಕೆಯ ಅಭಿವೃದ್ಧಿಯಿಂದ ಶುರುವಾಗಿ ಅದರ ಸಂಪೂರ್ಣ ನಿರ್ವಹಣೆ ಹಾಗೂ ಬಾಹ್ಯಾಕಾಶದಲ್ಲಿ ನೌಕೆಯ ಮೇಲೆ ಕಣ್ಗಾವಲಿರಿಸಿರುವುದು ಪೀಣ್ಯದಲ್ಲಿರುವ ಇಸ್ಟ್ರಾಕ್‍ನಿಂದ. ಈ ಕೇಂದ್ರವು ರಾಕೆಟ್ ಉಡ್ಡಯನದಿಂದ ಉಪಗ್ರಹ ಕಕ್ಷೆಗೆ ಸೇರಿಸುವುದು ಸೇರಿದಂತೆ ಅದರ ಜೀವಿತಾವಧಿಯ ಟ್ರ್ಯಾಕಿಂಗ್ ಮಾಡುತ್ತದೆ. ಈ ಮೂಲಕ ಉಪಗ್ರಹಕ್ಕೆ ಕಮಾಂಡ್ ಮಾಡುತ್ತದೆ.

ಮೋಕ್ಸ್ ಕೇಂದ್ರ ಉಡ್ಡಯನದ ಎಲ್ಲಾ ಮಾಪನಾಂಕಗಳ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ದಾಖಲಿಸುತ್ತದೆ. ಇದನ್ನೂ ಓದಿ: ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

ಚಂದ್ರಯಾನ-3 ಉಡ್ಡಯನದ ಬಳಿಕ ಭೂಮಿ ಕಕ್ಷೆ ತೊರೆದು ಚಂದ್ರನ ಕಕ್ಷೆ ಸೇರಿದ್ದು, ನೌಕೆಯಿಂದ ಲ್ಯಾಂಡರ್ ಪ್ರತ್ಯೇಕಗೊಂಡು ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿದಾಗ ಮತ್ತು ಚಂದ್ರನ ಮೇಲೆ ಇಳಿದ ಕೂಡಲೇ ಲ್ಯಾ0ಡರ್‌ನಿಂದ ಹೊರಟ ಮೊದಲ ಸಂದೇಶ ತಲುಪಿದ್ದು ಇದೇ ಕೇಂದ್ರಕ್ಕೆ. ಇದು ಇಸ್ರೋದ ನೌಕೆಗಳ ಮಾರ್ಗವನ್ನು ನಿರ್ವಹಿಸುವ ಮತ್ತು ನೌಕೆಗೆ ಬೇಕಾದ ಸೂಚನೆಗಳನ್ನು ಕಳುಹಿಸುವ ಕೇಂದ್ರವಾಗಿದೆ. ಇಲ್ಲಿ ಹಲವು ವಿಜ್ಞಾನಿಗಳು ಪ್ರತಿ ಕ್ಷಣವೂ ನೌಕೆಯ ಮೇಲೆ ನಿಗಾ ವಹಿಸಿದ್ದಾರೆ. ಇದರಿಂದಾಗಿ ಸರಿಯಾದ ಸಮಯಕ್ಕೆ ನೌಕೆ ಕಕ್ಷೆಯನ್ನು ಸೇರಿದೆ ಎಂಬುದು ಗಮನಾರ್ಹ ವಿಚಾರ. ಇದನ್ನೂ ಓದಿ: ಚಂದ್ರನ ಮೇಲೆ ಭಾರತದ ಮುದ್ರೆ – ಚಂದ್ರಯಾನ 3 ಸಕ್ಸಸ್ ಮುಂದೇನು?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್