ಕೋಡಿ ಬಿದ್ದ ಕರೆಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು

Public TV
1 Min Read

ಬಳ್ಳಾರಿ: ಕೋಡಿ ಬಿದ್ದಿದ್ದ ಕೆರೆಯಲ್ಲಿ (Lake) ಸೆಲ್ಪಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ (Kudligi) ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಕೆ.ದಿಬ್ಬದಹಳ್ಳಿ ಗ್ರಾಮದ ಚೇತನ್ ಕುಮಾರ್ (21) ಮೃತ ದುರ್ದೈವಿ. ಕಳೆದ ವಾರ ಭಾರೀ ಮಳೆಯಿಂದಾಗಿ ಗಂಡಬೊಮ್ಮನಹಳ್ಳಿ ಕೆರೆ ಸಂಪೂರ್ಣ ಭರ್ತಿ ಆಗಿತ್ತು. ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದು ಕೆರೆ ಕೋಡಿ ಕೂಡಾ ಬಿದ್ದಿತ್ತು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಭಾರತದ ಹಿಂದೂಗಳಿಗೂ ಒಂದು ಪಾಠ: ಮೋಹನ್‌ ಭಾಗವತ್‌

ಕೋಡಿ ಬಿದ್ದಿದ್ದರಿಂದ ಯುವಕ ಚೇತನ್ ಕುಮಾರ್ ಸೆಲ್ಫಿ (Selfie) ತೆಗೆದಿಕೊಳ್ಳಲು ಹೋಗಿದ್ದ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕೋಡಿ ಬಿದ್ದಿರುವ ಜಾಗಕ್ಕೆ ಚೇತನ್ ಬಿದ್ದಿದ್ದಾನೆ. ಚೇತನ್ ಕೆರೆಗೆ ಬಿದ್ದ ಕೂಡಲೇ ಅಕ್ಕಪಕ್ಕದ ಜನ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಚೇತನ್‌ ಕುಮಾರ್‌ ಶವ 200 ಮೀಟರ್‌ ದೂರದಲ್ಲಿ ಸಿಕ್ಕಿದೆ.  ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

ಮೃತ ಚೇತನ್ ಮನೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

 

Share This Article