ಮೋದಿ, ಯೋಗಿಯನ್ನು ಹೊಗಳಿದ್ದಕ್ಕೆ ಹೆಂಡತಿ ಮುಖಕ್ಕೆ ಬಿಸಿ ಸಾಂಬಾರ್‌ ಎರಚಿ ತಲಾಖ್‌ ನೀಡಿದ ಪತಿ

Public TV
1 Min Read

ಲಕ್ನೋ: ಪ್ರಧಾನಿ ಮೋದಿ (Narendra Modi), ಯುಪಿ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೊಗಳಿದ್ದಕ್ಕೆ ಹೆಂಡತಿ ಮುಖಕ್ಕೆ ಕುದಿಯುವ ಸಾಂಬರ್‌ ಎರಚಿ ತಲಾಖ್‌ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಬಹ್ರೈಚ್‌ನ 19 ವರ್ಷದ ವಿವಾಹಿತ ಮಹಿಳೆಯೊಬ್ಬರು ಪತಿಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಹೊಗಳಿದ್ದಕ್ಕೆ ಆಕೆಯ ಪತಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಕುಸ್ತಿಪಟು ವಿನೇಶ್ ಫೋಗಟ್?

ಅತ್ತೆ, ಪತಿ ಕ್ರೂರವಾಗಿ ಹಿಂಸಿಸಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಆಕೆಯ ದೂರಿನ ಮೇರೆಗೆ ಆಕೆಯ ಪತಿ ಅರ್ಷದ್, ಇಬ್ಬರು ಸೋದರಳಿಯರಾದ ಫರ್ಹಾನ್ ಮತ್ತು ಶಫಾಫ್, ಸೊಸೆ ಸಿಮ್ರಾನ್, ಅತ್ತೆ ರೈಸಾ, ಮಾವ ಇಸ್ಲಾಂ, ಆಕೆಯ ಪತಿಯ ಸಹೋದರಿ ಕುಲ್ಸುಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಯೋಧ್ಯೆಯ ಅರ್ಷದ್‌ನನ್ನು ಬಹ್ರೈಚ್‌ನ ಮರಿಯಮ್ ಶರೀಫ್ ವಿವಾಹವಾಗಿದ್ದರು. ಅಯೋಧ್ಯೆಯಲ್ಲಿ ಪ್ರಧಾನಿ ಮತ್ತು ಸಿಎಂ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಕ್ಕೆ ನನ್ನ ಪತಿ ಸಿಟ್ಟಿಗೆದ್ದರು ಎಂದು ಮಹಿಳೆ ದೂರಿರುವುದಾಗಿ ಬಹ್ರೈಚ್‌ನ ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ತಿಳಿಸಿದ್ದಾರೆ. ಪತ್ನಿ ಮೇಲೆ ಬಿಸಿ ಸಾಂಬಾರ್‌ ಎರಗಿ ದೌರ್ಜನ್ಯ ಎಸಗಿದ್ದಾನೆ. ನಂತರ ಆಕೆಯನ್ನು ತವರು ಮನೆಗೆ ಕಳುಹಿಸಿ, ಕೆಲ ದಿನಗಳ ಬೆನ್ನಲ್ಲೇ ತಲಾಖ್‌ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಕೋಡಾ ಎಸ್‌ಯುವಿಗೆ ಸಂಸ್ಕೃತದ ‘ಕೈಲಾಕ್’ ಹೆಸರಿಟ್ಟು ಕಾರು ಗೆದ್ದ ಕಾಸರಗೋಡಿನ ಕುರಾನ್ ಶಿಕ್ಷಕ

ಮರಿಯಮ್‌ಳನ್ನು ಆಕೆಯ ಪತಿ ಒಮ್ಮೆ ಅಯೋಧ್ಯೆಗೆ ಕರೆದೊಯ್ದಿದ್ದ. ಅಯೋಧ್ಯೆ ಪರಿವರ್ತನೆ ಕಂಡು ಆಕೆ ಪ್ರಭವಿತಳಾಗಿದ್ದಳು. ‘ಯೋಗಿಜಿ ಮತ್ತು ಮೋದಿಜಿ ಅದ್ಭುತವಾದ ಕೆಲಸ ಮಾಡಿದ್ದಾರೆ’ ಎಂದು ಆಕೆ ಹೊಗಳಿದ್ದಳು. ಆಕೆಯ ಗಂಡ ಮತ್ತು ಅತ್ತೆ ಇಬ್ಬರಿಗೂ ಇದು ಇಷ್ಟವಾಗಲಿಲ್ಲ. ಅವರು ಆಕೆಯನ್ನು ನಿಂದಿಸಿ ಥಳಿಸಿದ್ದಾರೆ.

Share This Article