AI ಯುವತಿಯ ಮೋಹಕ್ಕೆ ಬಿದ್ದು ಬಟ್ಟೆ ಬಿಚ್ಚಿ ಪೆಚ್ಚಾದ ಯುವಕ – 1.53 ಲಕ್ಷ ಲೂಟಿ

1 Min Read

ಬೆಂಗಳೂರು: ಎಐ ಯುವತಿಯ (AI Girl) ಮೋಹಕ್ಕೆ ಬಿದ್ದು ಯುವಕನೊಬ್ಬ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ.

ಬೆಂಗಳೂರಿನ 26 ವರ್ಷದ ಯುವಕನೊಬ್ಬ Happn ಡೇಟಿಂಗ್ ಆ್ಯಪ್‌ನಲ್ಲಿ (Dating App) ಖಾತೆ ತೆರೆದಿದ್ದ. ಈ ಖಾತೆಗೆ ಇಶಾನಿ ಎಂಬ ಯುವತಿಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದೆ. ಬಳಿಕ ಮೊಬೈಲ್ ನಂಬರ್ ಶೇರ್ ಆಗಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದರು. ಇದನ್ನೂ ಓದಿ: ಚಿನ್ನಾಭರಣ ನಮ್ಮ ಪೂರ್ವಜರದ್ದು, ವಾಪಸ್ ನೀಡಿ – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

 

ಕೆಲದಿನಗಳ‌ ಹಿಂದೆ ಯುವತಿಯ ಮೊಬೈಲಿನಿಂದ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು‌.‌ ನಂತರ ನೀನು ಬಟ್ಟೆ ಬಿಚ್ಚು ಎಂದು ಯುವಕನ ಬಟ್ಟೆ ಬಿಚ್ಚಿಸಿದ್ದಳು. ಯುವಕ ಬೆತ್ತಲಾಗಿದ್ದನ್ನ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು‌ ನಂತರ ಯುವಕನಿಗೆ ಆತನ ಬೆತ್ತಲೆ ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.

ಯುವಕನಿಂದ ಹಂತ ಹಂತವಾಗಿ 1.53 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇನ್ನೂ ಹಣ ಕೇಳಿದಾಗ ಕೇಂದ್ರ ಸೆನ್ ಠಾಣೆಗೆ ಯುವಕ ದೂರು ನೀಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಎಐ ಯುವತಿ ಮೂಲಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕೇಸ್ ದಾಖಲಿಸಿ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article