ಕುಟುಂಬದ ಇತರ ಪುರುಷರೊಂದಿಗೆ ಸೆಕ್ಸ್‌ ಮಾಡುವಂತೆ ಪತ್ನಿಗೆ ಕಿರುಕುಳ; ಕೇಸ್‌ ದಾಖಲಾಗ್ತಿದ್ದಂತೆ ಪತಿ ಜೂಟ್‌!

Public TV
1 Min Read

– ಟೀಗೆ ಮತ್ತಿನ ಔಷಧಿ ಬೆರಸಿ ಪತ್ನಿಯ ಪ್ರಜ್ಞೆ ತಪ್ಪಿಸುತ್ತಿದ್ದ ಪತಿರಾಯ
– 4 ಮಕ್ಕಳ ತಾಯಿಗೆ ನಿರಂತರ ಲೈಂಗಿಕ ಕಿರಕುಳ

ಜೈಪುರ: ತನ್ನ ಪತಿ ಕುಟುಂಬದಲ್ಲಿರುವ ಇತರ ಪುರುಷರೊಂದಿಗೂ (Family Members) ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಮೇಲೆ ಮಹಿಳೆಯೊಬ್ಬರು ಪತಿ, ಮಾವ ಮತ್ತು ಸೋದರ ಮಾವನ ವಿರುದ್ಧ ದೂರು ದಾಖಲಿರುವ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.

ಮಹಿಳೆ ನೀಡಿದ ದೂರಿನ ಮೇರೆಗೆ ಸಂತ್ರಸ್ತ ಮಹಿಳೆಯ ಮಾವ, ಸೋದರ ಮಾವ ಸೇರಿದಂತೆ 8 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ಸಂದ್ವಾ ಪೊಲೀಸ್ ಠಾಣಾ (Sandwa Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಮಹಿಳೆಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಇದ್ದಾಳೆ ಎಂದು ತಿಳಿದುಬಂದಿದೆ.

ಏನಿದು ಕೇಸ್‌?
ಸಂದ್ವಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರಿದ ಮಹಿಳೆಯೊಬ್ಬರು ಕಳೆದ 15-20 ವರ್ಷಗಳಿಂದ ಪತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ, ತನಗೆ ನಿರಂತರವಾಗಿ ಅಮಲಿನ ಪದಾರ್ಥ ನೀಡಿ ಕುಟುಂಬದ ಇತರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆಯೂ ಪತಿ ಒತ್ತಾಯಿಸುತ್ತಿದ್ದಾನೆ. ಆಕೆ ನಿರಾಕರಿಸಿದಾಗಲೆಲ್ಲ ತನಗೆ ಮನಸೋ ಇಚ್ಛೆ ಥಳಿಸುತ್ತಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

STOP RAPE

ಪಾಪಿ ಪತಿ ಮಾಡಿದ್ದಾರೂ ಏನು?
ಪ್ರತಿದಿನ ತನ್ನ ಪತ್ನಿ ಕುಡಿಯುತ್ತಿದ್ದ ಟೀಗೆ (Tea) ಅಮಲಿನ ಪದಾರ್ಥವನ್ನು ಬೆರಸಿ ಕುಡಿಯುವಂತೆ ಮಾಡುತ್ತಿದ್ದನು. ಟೀ ಕುಡಿದು ಪತ್ನಿ ಪ್ರಜ್ಞೆ ತಪ್ಪಿದ ಬಳಿಕ ಕುಟುಂಬದ ಇತರರಿಂದ ಅತ್ಯಾಚಾರ ಮಾಡಿಸುತ್ತಿದ್ದ. ಒಂದು ದಿನ ಆಕೆಯ ಇದರ ವಿರುದ್ಧ ದನಿ ಎತ್ತಿದ್ದಕ್ಕೆ ಹರಿತವಾದ ಆಯುಧ ಹಿಡಿದು ನಿನ್ನ ಕತ್ತು ಸೀಳುತ್ತೇನೆ ಎಂದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆಕೆ ತಪ್ಪಿಸಿಕೊಂಡು ಹೋಗಿ ಪ್ರಾಣ ಉಳಿಸಿಕೊಂಡಿದ್ದಳು. ಈಗ ಮತ್ತೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

Share This Article