ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

Public TV
2 Min Read

ನವದೆಹಲಿ: ವ್ಯಕ್ತಿಯೊಬ್ಬ (Man) ತನ್ನ ಕತ್ತು ಸೀಳಿಕೊಂಡು, ಕೈಯಲ್ಲಿ ಚಾಕು (Knife) ಹಾಗೂ ಗನ್ (Gun) ಅನ್ನು ಹಿಡಿದುಕೊಂಡು, ರಾಷ್ಟ್ರ ರಾಜಧಾನಿಯ ಬೀದಿಯಲ್ಲಿ ಓಡಾಡಿರುವ ಘಟನೆ ನಡೆದಿದೆ. ವ್ಯಕ್ತಿಯ ವಿಚಿತ್ರ ವರ್ತನೆಯನ್ನು ನೋಡಿ ಜನರು ಭೀತಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ದೆಹಲಿಯ (Delhi) ನಾಥು ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಯಲ್ಲಿ ದೃಶ್ಯಗಳು ಸೆರೆಯಾಗಿದೆ. ವ್ಯಕ್ತಿಯನ್ನು ಕ್ರಿಶನ್ ಶೇರ್ವಾಲ್ ಎಂದು ಗುರುತಿಸಲಾಗಿದೆ. ಆತ ತನ್ನ ಗಂಟಲನ್ನು ಸೀಳಿ, ರಕ್ತ ಸ್ರಾವವಾಗುತ್ತಿದ್ದರೂ ಜನನಿಬಿಡ ಪ್ರದೇಶದಲ್ಲಿ ಓಡಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಕಂಡು, ಹೆದರಿ ಅಲ್ಲಿಂದ ಓಡಿದ್ದಾರೆ.

ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ಸ್ಥಳೀಯರ ನೆರವಿನಿಂದ ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಶೇರ್ವಾಲ್ ತನ್ನನ್ನು ಹಿಡಿದಿದ್ದ ಪೊಲೀಸ್ ಕೈಗೆ ಚಾಕುವಿನಿಂದ ಇರಿದು, ಗಾಯಗೊಳಿಸಿದ್ದಾನೆ. ಮಾತ್ರವಲ್ಲದೇ ಅವರ ಪಿಸ್ತೂಲ್ ಅನ್ನು ಕಸಿದುಕೊಂಡು, ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

ಕೊನೆಗೆ ಶೇರ್ವಾಲ್‌ನನ್ನು ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ. ಆತ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದು, ಖಿನ್ನತೆಗೆ ಒಳಗಾಗಿ ಈ ರೀತಿ ವಿಚಿತ್ರವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ತನ್ನ ಕತ್ತನ್ನು ಸೀಳಿಕೊಂಡಿದ್ದ ಶೇರ್ವಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದೀಗ ವ್ಯಕ್ತಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 394 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರ ಗಾಯವನ್ನು ಉಂಟುಮಾಡುವ ಪ್ರಯತ್ನ), 186 (ಸಾರ್ವಜನಿಕ ಸೇವಕನಿಗೆ ಅಡ್ಡಿಪಡಿಸುವುದು), 353 (ಅಪರಾಧ ಅಥವಾ ಕ್ರಿಮಿನಲ್ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ

Share This Article
Leave a Comment

Leave a Reply

Your email address will not be published. Required fields are marked *