ಮೈಗೆ ಬೆಂಕಿ ಹಚ್ಚಿಕೊಂಡು ಸಂಸತ್‌ ಭವನದ ಕಡೆ ಓಡಿದ ವ್ಯಕ್ತಿ – ದೇಹದ 95% ಭಾಗ ಸುಟ್ಟು ಆಸ್ಪತ್ರೆಗೆ ದಾಖಲು

Public TV
1 Min Read

ನವದೆಹಲಿ: ಹೊಸ ಸಂಸತ್‌ ಭವನದ ಬಳಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕೂಡಲೇ ಸ್ಥಳೀಯ ಹಾಗೂ ರೈಲ್ವೆ ಪೊಲೀಸರು ಕೆಲ ನಾಗರಿಕರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಆ ವ್ಯಕ್ತಿಗೆ ಶೇ.95ರಷ್ಟು ಸುಟ್ಟ ಗಾಯಗಳಾಗಿವೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಕಟ್ಟಡದ ಬಳಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳದಲ್ಲಿ ಭಾಗಶಃ ಸುಟ್ಟ ಎರಡು ಪುಟಗಳ ನೋಟ್‌ ಪತ್ತೆಯಾಗಿದೆ. ಜಿತೇಂದ್ರ ಅವರ ದೇಹದ ಮೇಲೆ ಶೇಕಡಾ 95 ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಬರ್ನ್ಸ್ ಐಸಿಯುನಲ್ಲಿ ಪ್ರತ್ಯೇಕ ಹಾಸಿಗೆಯಲ್ಲಿ ಇರಿಸಲಾಗಿದೆ. ಪ್ರಸ್ತುತ, ವೈದ್ಯರ ತಂಡವು ಆತನನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, ರೈಲ್ವೆ ಭವನದ ಬಳಿಯ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಸಂಸತ್ ಭವನದ ಕಡೆಗೆ ಓಡಿದ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಭವನ ಸಂಸತ್ತಿನ ಕಟ್ಟಡದ ಎದುರು ಇದೆ.

‘ಬಾಗ್‌ಪತ್‌ನಲ್ಲಿ ಮತ್ತೊಂದು ಕುಟುಂಬದ ಜೊತೆ ವ್ಯಕ್ತಿಯೊಬ್ಬನ ಕುಟುಂಬ ಜಗಳವಾಗಿದ್ದು, ಎರಡೂ ಕಡೆಯ ಜನರು ಜೈಲು ಪಾಲಾಗಿದ್ದರು. ಇದರಿಂದ ಮನನೊಂದ ಜಿತೇಂದ್ರ, ಇಂದು ಬೆಳಗ್ಗೆ ರೈಲಿನಲ್ಲಿ ದೆಹಲಿಗೆ ಬಂದಿದ್ದ. ರೈಲ್ವೇ ಭವನದ ವೃತ್ತಕ್ಕೆ ಬಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article