ಕಾಮದಾಸೆಗೆ ಅಪ್ರಾಪ್ತೆಯನ್ನ ಕೊಂದು, ಶೂ ಬ್ಯಾಗ್‍ನಲ್ಲಿ ಶವವಿಟ್ಟು ಸುಟ್ಟ

Public TV
3 Min Read

– ಬಾಟಲಿಯಿಂದ ಹೊಡೆದು ಕೊಲೆಗೈದು ಪ್ಯಾಕ್ ಮಾಡ್ದ
– ಬೈಕಿನಲ್ಲಿ 90 ಕಿ.ಮಿ ಶವ ಕೊಂಡೊಯ್ದು ಸುಟ್ಟ
– ಒಂದೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್

ಮುಂಬೈ: ತನ್ನ ಕಾಮದಾಸೆ ತೀರಿಸಿಕೊಳ್ಳಲು ಯುವಕನೋರ್ವ ನೆರೆ ಮನೆಯ 14 ವರ್ಷದ ಬಾಲಕಿಯನ್ನು ಮನೆಗೆ ಎಳೆದೊಯ್ದು ಕಿರುಕುಳ ನೀಡಿ ಕೊಂದು, ಶೂ ಬ್ಯಾಗ್‍ನಲ್ಲಿ ಶವ ಪ್ಯಾಕ್ ಮಾಡಿ ಸುಟ್ಟ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಘಟನೆ ನಡೆದ ಒಂದೂವರೆ ತಿಂಗಳ ಬಳಿಕ ಬಾಲಕಿಯ ನೆರೆ ಮನೆ ಯುವಕನೇ ಆರೋಪಿ ಎಂಬುದು ತಿಳಿದುಬಂದಿದೆ. ಮುಂಬೈನ ಕಂಡಿವ್ಲಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಹಾಗೂ ಆಕೆಯ ಪೋಷಕರು ಕಂಡಿವ್ಲಿಯ ಚೌಲ್‍ನಲ್ಲಿ ವಾಸವಾಗಿದ್ದರು. ಬಾಲಕಿಯ ನೆರೆ ಮನೆಯಲ್ಲಿಯೇ 25 ವರ್ಷದ ಆರೋಪಿ ಕೂಡ ವಾಸಿಸುತ್ತಿದ್ದನು. ಆರೋಪಿ ಮನೆ ಬಳಿಯೇ ಶೂ ಪಾಲಿಶ್ ಹಾಗೂ ಶೂ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

ಅಕ್ಟೋಬರ್ 1 ರಂದು ಮಧ್ಯಾಹ್ನ 2 ಗಂಟೆ ವೆಳೆಗೆ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಪೋಷಕರು ಹುಡುಕಾಟ ನಡೆಸಿದರೂ ಆಕೆ ಸಿಕ್ಕಿರಲಿಲ್ಲ. ಬಳಿಕ ಅಕ್ಟೋಬರ್ 2 ರಂದು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆದರೆ ಅಕ್ಟೋಬರ್ 3ರಂದು ಬಾಲಕಿ ಶವ ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಸಮೀಪ ತಲಸಾರಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: 19 ವರ್ಷದ ಲಿವಿಂಗ್ ಪಾರ್ಟ್ನರ್‌ನನ್ನು ಕೊಂದು ಬೆಂಕಿ ಹಚ್ಚಿದ

ಅರೆ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಂಬಂಧ ಬಾಲಕಿ ಪೋಷಕರು, ಸ್ನೇಹಿತರು ಹಾಗೂ ಆರೋಪಿಯನ್ನೂ ಕೂಡ ವಿಚಾರಣೆ ಮಾಡಿದ್ದರು. ಈ ವೇಳೆ ಆರೋಪಿ ತನಗೆ ಏನು ಗೊತ್ತೇ ಇಲ್ಲವೆನ್ನುವ ರೀತಿ ಪೊಲೀಸರ ಬಳಿ ವರ್ತಿಸಿದ್ದನು. ಆದರೂ ಪೊಲೀಸರಿಗೆ ಆರೋಪಿ ಮೇಲೆ ಅನುಮಾನವಿತ್ತು. ಈ ಹಿನ್ನೆಲೆ ಆತನ ಫೋನ್ ನಂಬರ್ ಟ್ರ್ಯಾಕ್ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ.

ಮೊದಲು ವಿಚಾರಣೆ ವೇಳೆ ಆರೋಪಿ ನನ್ನ ಬಳಿ ಒಂದೇ ಸಿಮ್ ಇದೆ ಎಂದಿದ್ದನು. ಆದರೆ ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಆತನ ಬಳಿ ಇನ್ನೊಂದು ಸಿಮ್ ಇರುವ ಬಗ್ಗೆ ತಿಳಿದಿದೆ. ಪೊಲೀಸರು ಆ ನಂಬರ್ ಟವರ್ ಲೊಕೇಶನ್ ಪತ್ತೆ ಮಾಡಿದಾಗ ಬಾಲಕಿ ನಾಪತ್ತೆಯಾದ ದಿನ ಆರೋಪಿ ತಲಸಾರಿ ಪ್ರದೇಶದಲ್ಲಿ ಇದ್ದ ಎಂಬುದು ಪತ್ತೆಯಾಗಿದೆ. ಇದೇ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಕಾಮದಾಸೆಯಿಂದ ಸೊಸೆಯನ್ನೇ ಚುಚ್ಚಿ ಕೊಂದ ಮಾವ

ಅ. 1ರಂದು ಮನೆಯಲ್ಲಿ ಒಬ್ಬನೇ ಇದ್ದೆ. ಮಧ್ಯಾಹ್ನ 2:30ರ ಸಮಯಕ್ಕೆ ಬಾಲಕಿ ನನ್ನ ಮನೆ ಬಳಿ ಹೋಗುತ್ತಿದ್ದಳು. ಆಗ ಆಕೆಯನ್ನು ಮನೆಯೊಳಗೆ ಎಳೆದುಕೊಂಡು ಹೋದೆ. ಆಗ ಬಾಲಕಿ ಕಿರುಚಾಡಲು ಆರಂಭಿಸಿದಳು. ಅಕ್ಕಪಕ್ಕದವರು ಬರುತ್ತಾರೆ ಎಂಬ ಭಯಕ್ಕೆ ಕೈಗೆ ಸಿಕ್ಕ ಬಾಟಲಿಯಿಂದ ಆಕೆಯ ತಲೆಗೆ ಹೊಡೆದೆ. ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಳು. ಭಯಗೊಂಡು ಆಕೆಯ ಶವವನ್ನು ಶೂ ಬ್ಯಾಗ್‍ನಲ್ಲಿ ಪ್ಯಾಕ್ ಮಾಡಿ, 90 ಕಿ.ಮಿ ಬೈಕಿನಲ್ಲಿ ತೆಗೆದುಕೊಂಡು ಹೋದೆ. ಬಳಿಕ ತಲಸಾರಿ ಬಳಿಯ ಹೈವೇ ಪಕ್ಕದಲ್ಲಿ ಅದನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದೆ. ಬಳಿಕ ಅಲ್ಲಿಂದ ಮನೆಗೆ ವಾಪಸ್ ಬಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಈ ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಆರೋಪಿ ಯಾರೆಂದು ತಿಳಿದುಬಂದಿದೆ. ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *