ಎರಡೂ ಹೆಣ್ಣುಮಗು ಅಂತ ಸಿಟ್ಟಿಗೆದ್ದ ಪತಿ- 2ನೇ ಮಗುವನ್ನು ಮಾರಲು ಮುಂದಾದ ಪಾಪಿ

Public TV
1 Min Read

ಹಾವೇರಿ: ಅವರಿಬ್ಬರಿಗೂ ಮದುವೆಯಾಗಿ ಸುಮಾರು ಆರು ವರ್ಷ ಕಳೆದಿವೆ. ಅದರೆ ಆ ದಂಪತಿಗೆ ಮೊದಲ ಮಗು ಹೆಣ್ಣು, ಕಳೆದ ನಾಲ್ಕು ದಿನಗಳ ಹಿಂದೆ ಜನಿಸಿದ ಮಗು ಕೂಡಾ ಹೆಣ್ಣು. ಎರಡು ಮಕ್ಕಳು ಹೆಣ್ಣುಮಕ್ಕಳು ಹುಟ್ಟಿದ್ದಕ್ಕೆ, ಮಗುವನ್ನೇ ಕಿಡ್ನಾಪ್ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಪತಿ ಮಾಹಾಶಯ. ಪತಿ ಮಹಾಶಯನಿಂದ ಮಗುವನ್ನ ಕಾಪಾಡಿದ ಪತ್ನಿ ಪರಿಚಯಸ್ಥರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿಸಿದ್ದಾನೆ. ಬಾಣಂತಿಯ ಮಹಿಳೆ ಹಸಗೂಸು ಕರೆದುಕೊಂಡು ಎಸ್‍ಪಿ ಕಚೇರಿಗೆ ಆಗಮಿಸಿದಳು.

ಮೊದಲನೇಯದು ಹೆಣ್ಣು ಮಗು, ಎರಡನೇಯದು ಹೆಣ್ಣು ಮಗು ಅಂತ ಸಿಟ್ಟಿಗೆದ್ದ ಪಾಪಿ ಪತಿರಾಯ ಹಸುಗೂಸನ್ನೇ ಮಾರಾಟ ಮಾಡಲು ಮುಂದಾಗಿದ್ದಾನೆ. ಕಳೆದ 4 ದಿನಗಳ ಹಿಂದೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಪತಿ ಸಿದ್ದಲಿಂಗಪ್ಪ ಹಸುಗೂಸನ್ನ ಕಿಡ್ನಾಪ್ ಮಾಡಿ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದ ಪತ್ನಿ ಹಸುಗೂಸು ಸಮೇತ ಅಂಬುಲೆನ್ಸ್ ನಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ:ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ- 44 ಯುವತಿಯರ ರಕ್ಷಣೆ

ಮಗು ರಕ್ಷಿಸಿದವರ ವಿರುದ್ಧವೇ ಕಿಡ್ನಾಪ್ ದೂರು: ಮತ್ತೊಂದೆಡೆ ಹಸುಗೂಸನ್ನು ಮಾರಲು ಮುಂದಾಗಿದ್ದ ಸಿದ್ದಲಿಂಗಪ್ಪನ ಕೈಯಿಂದ ಪರಿಚಯಸ್ಥ ಯುವಕರು ಮಗುವನ್ನು ಕಾಪಾಡಿದ್ದರು. ಅವರ ವಿರುದ್ಧವೇ ಸಿದ್ಧಲಿಂಗಪ್ಪ ಕಿಡ್ನಾಪ್ ಆರೋಪ ಮಾಡಿ ದೂರು ನೀಡಿದ್ದಾನೆ. ಪ್ರಕರಣ ಸಂಬಂಧ ಓರ್ವ ಜೈಲುಪಾಲಾಗಿದ್ದಾನೆ. ಹೀಗಾಗಿ ಸಹಾಯ ಮಾಡಲು ಬಂದವರದ್ದು ತಪ್ಪಿಲ್ಲಾ ಅವರಿಕೇಗೆ ಶಿಕ್ಷೆ. ಅವರನ್ನು ಬಿಟ್ಬಿಡಿ. ನನ್ನ ಪತಿರಾಯನೆ ತನಗೆ ಹುಟ್ಟಿದ ಮಕ್ಕಳನ್ನ ಕದ್ದು ಮಾರಲು ಯತ್ನಿಸಿದ್ದಾನೆ. ಅವರಿಗೆ ಗಂಡು ಹುಟ್ಟಿಲ್ಲಾ ಎಂದು ಬೇಸರವಿದೆ. ಬೇರೆ ಮಹಿಳೆಯರ ಜೊತೆ ಅನೈತಿಕ ಸಂಬಂಧವಿದೆ ಅಂತ ಪತ್ನಿ ಗೀತಾ ಆರೋಪಿಸಿದ್ದಾರೆ.

ಸದ್ಯ ಸಿದ್ದಲಿಂಗಪ್ಪ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಎರಡು ಹೆಣ್ಣುಮಕ್ಕಳು ಜನಿಸಿದ ಕಾರಣಕ್ಕಾಗಿ ಪಾಪಿ ತಂದೆ ಮಗಳನ್ನ ಮಾರಾಟ ಮಾಡಲು ಮುಂದಾಗಿದ್ದು ದುರಂತವೇ ಸರಿ.

Share This Article