ಹಳೆ ವೈಷಮ್ಯ – ತಲೆ ಮೇಲೆ ಕಾರು ಹತ್ತಿಸಿ ವ್ಯಕ್ತಿಯ ಹತ್ಯೆ

Public TV
1 Min Read

ಶಿವಮೊಗ್ಗ: ವ್ಯಕ್ತಿಯೊಬ್ಬನ ಕುತ್ತಿಗೆ ಹಿಸುಕಿ, ಆತನ ತಲೆಯ ಮೇಲೆ ಕಾರು ಹತ್ತಿಸಿ ಕೊಲೆಗೈದಿರುವ ಘಟನೆ ಸಾಗರದ (Sagar) ಚಿಪ್ಪಳ್ಳಿ ಎಂಬಲ್ಲಿ ನಡೆದಿದೆ.

ರಫೀಕ್ (45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆಯಾದ ರಫೀಕ್ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ ಎನ್ನಲಾಗಿದೆ. ಮೃತ ರಫೀಕ್ ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಕಳೆದ ವರ್ಷ ತನ್ನ ಸಹೋದರನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ರಫೀಕ್ ಜೈಲಿನಿಂದ ಹೊರಗೆ ಬಂದಿದ್ದ. ಈ ಹಿಂದೆ ರಫೀಕ್ ಮಾಡಿದ ಕೊಲೆಯೇ ಆತನ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೊನ್ನಾವರದಲ್ಲಿ ಭೀಕರ ಅಪಘಾತ – ಬಸ್ಸಿನಡಿಗೆ ಸಿಲುಕಿ ತಾಯಿ, ಮಗಳು ಸಾವು

ರಫೀಕ್‍ನ ಮತ್ತೊಬ್ಬ ಸಹೋದರನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಡ್, ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು

Share This Article