ಮನೆ ಮುಂದೆ ನಾಯಿ ಬಹಿರ್ದೆಸೆ ಮಾಡಿದ್ದಕ್ಕೆ ಜಗಳ- ವ್ಯಕ್ತಿ ಕೊಲೆಯಲ್ಲಿ ಅಂತ್ಯ!

Public TV
1 Min Read

ಚಿತ್ರದುರ್ಗ: ಮನೆ ಮುಂದೆ ನಾಯಿ ಬಹಿರ್ದೆಸೆ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟದಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸ್ವಾಮಿ ಎಂಬ ವ್ಯಕ್ತಿಯು ತಮ್ಮ ಸಾಕು ನಾಯಿಯನ್ನು ಬಹಿರ್ದೆಸೆಗೆ ಕರೆದೊಯ್ಯತಿದ್ದರು. ನಿನ್ನೆ ಸಹ ಎಂದಿನಂತೆ ನಾಯಿಯನ್ನು ಹೊರಗಡೆ ಕರೆದುಕೊಂಡು ವಿಹಾರಕ್ಕೆ ತೆರಳಿದ್ದಾರೆ. ಆ ವೇಳೆ ನಮ್ಮ ಮನೆ ಮುಂದೆ ನಿಮ್ಮ ನಾಯಿ ಗಲೀಜು ಮಾಡಿಸಬೇಡ. ನಮಗೆ ದುರ್ವಾಸನೆ ಬರುತ್ತದೆ ಅಂತ ಮಹಂತೇಶ ಎಂಬವರ ಕುಟುಂಬಸ್ಥರು ಹೇಳಿದ್ದಾರೆ. ಈ ವೇಳೆ ಸ್ವಾಮಿ ಮತ್ತು ನೆರೆಮನೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ಕ್ಷುಲ್ಲಕ ವಿಚಾರ ಜಗಳಕ್ಕೆ ಕಾರಣವಾಗಿ ಮಹಂತೇಶ ಎಂಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ರಾಜ್‍ಕುಮಾರ್ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು: ಜಮೀರ್ ಪುತ್ರ ಝೈದ್ ಖಾನ್

ಜಗಳ ಮಾಡುತ್ತಿದ್ದಾಗ ಸ್ವಾಮಿ ಮರದ ತುಂಡಿನಿಂದ ಜಾಲಿಕಟ್ಟೆ ನಿವಾಸಿ ಮಹಂತೇಶ್ (23) ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೀಗಾಗಿ ಗಂಭೀರವಾಗಿ ಗಾಯಗೊಂಡ ಮಹಂತೇಶ್ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

ಇನ್ನು ತಮ್ಮ ಮಗನ ಸಾವಿನಿಂದ ಮನನೊಂದಿರುವ ಮಹಂತೇಶ್ ಕುಟುಂಬಸ್ಥರು ಗ್ರಾಮದ ಸ್ವಾಮಿ & ಪತ್ನಿ ಕಮಲಮ್ಮ ವಿರುದ್ಧ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಾಧಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *