ಕೆಂಗೇರಿಯಲ್ಲಿ ಕಾಮುಕನ ವಿಕೃತಿ – ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

Public TV
1 Min Read

ಬೆಂಗಳೂರು: ಮಹಿಳೆಯೊಬ್ಬಳ (Woman) ಮುಂದೆ ಕಾಮುಕನೊಬ್ಬ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿಸಿರುವುದು ಕೆಂಗೇರಿಯಲ್ಲಿ (Kengeri) ನಡೆದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿ ಮಾಡಿ ಆತ ಅಟ್ಟಹಾಸ ಮೆರೆದಿದ್ದಾನೆ.

ಚಂದ್ರಾಹಸನ್ ಎಂಬಾತ ಮಹಿಳೆಯೊಬ್ಬರ ಮುಂದೆ ಜಿಪ್ ಓಪನ್ ಮಾಡಿ ಅಸಭ್ಯ ವರ್ತನೆ ಮಾಡಿದ್ದಾನೆ. ಕೆಂಗೇರಿ ಉಪ ನಗರದಲ್ಲಿ ಮಾರ್ಟ್‌ ಒಂದರ ವಾಚ್ ಮ್ಯಾನ್ ಆಗಿರೋ ಈತ ಮಾಲ್‍ಗೆ ಬರುವ ಹೆಣ್ಮಕ್ಕಳ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನ ಮಾರ್ಟ್‍ನ ಮ್ಯಾನೇಜರ್‌ಗೆ ಹೇಳಲು ಮಹಿಳೆಯೊಬ್ಬಳು ಹೇಳಲು ಹೋದಾಗ ಆ ಮಹಿಳೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ, ಅಶ್ಲೀಲವಾಗಿ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತು ಮಹಿಳೆ ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೊಪ್ಪಳ| ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಕೊಲೆ

ಮಾರ್ಟ್‌ ಸಮೀಪವೇ ಮಹಿಳೆಯ ಅಂಗಡಿ ಇದೆಯಂತೆ. ಈ ಚಂದ್ರಹಾಸನ್ ಜಾಗದ ವಿಚಾರವಾಗಿ ಗಲಾಟೆ ಮಾಡಿದ್ದನ್ನಂತೆ. ಇನ್ನೂ ಮಾರ್ಟ್‍ಗೆ ಬರುವ ಹಣ್ಮಕ್ಕಳಿಗೆ, ಅಲ್ಲಿ ಕೆಲಸ ಮಾಡುವ ಕೆಲ ಯುವತಿಯರ ಜೊತೆಯೂ ಅಸಭ್ಯವಾಗಿ ವರ್ತಿಸ್ತಿದ್ದನಂತೆ. ಈ ವಿಚಾರಗಳ ಬಗ್ಗೆ ಮಹಿಳೆ ಸಂಜೆ ಮ್ಯಾನೇಜರ್‍ಗೆ ಹೇಳಲು ಹೋದಾಗ ಈ ಗಲಾಟೆಯಾಗಿದೆ. ಮಾತಿಗೆ ಮಾತು ಶುರುವಾಗಿ ಮಹಿಳೆ ಮೇಲೆ ಈ ವ್ಯಕ್ತಿ ಹಲ್ಲೆ ಮಾಡಿದ್ದು, ಕತ್ತು, ಕಿವಿಗೆ ಗಾಯವಾಗಿದ್ದು, ರಕ್ತಸ್ರಾವ ಆಗಿದೆ.

ಅಲ್ಲಿನ ಸ್ಥಳೀಯರು ಚಂದ್ರಹಾಸ್‍ಗೆ ಕ್ಲಾಸ್ ತೆಗದುಕೊಂಡಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಗೂಸಾ ನೀಡಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪತಿಯನ್ನು ಪತ್ನಿಯೇ ನದಿಗೆ ತಳ್ಳಿದ ಕೇಸ್‌ಗೆ ಟ್ವಿಸ್ಟ್‌; ಬಾಲ್ಯವಿವಾಹ ಕೇಸಲ್ಲಿ ನಾಪತ್ತೆಯಾಗಿದ್ದ ಗಂಡ ಅರೆಸ್ಟ್‌

Share This Article