ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

Public TV
2 Min Read

ನವದೆಹಲಿ: ದೆಹಲಿಯ ಮಹಿಳಾ ಪ್ರೊಫೆಸರ್ ಮುಂದೆಯೇ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಕೃತ ಕಾಮಿ ಮಾಡಿದ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜರ್ಕಿನ್ ಜೊತೆಯಿದ್ದ ಟೋಪಿಯನ್ನು ಆತ ಹಾಕಿದ್ದ ಕಾರಣ ಈತನ ಗುರುತು ಪತ್ತೆಯಾಗಿಲ್ಲ. ದೆಹಲಿಯ ಕನೌಟ್ ಪ್ಲೇಸ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ದೂರು ದಾಖಲಿಸಿದ್ದಾರೆ.

ಪ್ರಕರಣ ನಡೆದಾಗ ಸಂತ್ರಸ್ತೆ ಟೆರೇಸ್ ನಲ್ಲಿ ಫೋನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ 20ರ ಆಸುಪಾಸಿನಲ್ಲಿದ್ದ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿರುವು ಗೊತ್ತಾಗಿದೆ. ಈತನನ್ನು ಪ್ರಶ್ನಿಸಿದಾಗ ಈತ ತನ್ನ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಗುರುವಾರ ಮಧ್ಯಾಹ್ನ 1.30ಕ್ಕೆ ನಾನು ಬ್ರೇಕ್ ಟೈಮಲ್ಲಿ ಟೆರೇಸ್ ಮೇಲೆ ಹೋಗಿದ್ದೆ. ಈ ವೇಳೆ ನಾನು ಫೋನಲ್ಲಿ ಮಾತನಾಡುತ್ತಿದ್ದೆ. ಆಗ ನನ್ನನ್ನು 20ರ ಆಸುಪಾಸಿನ ಯುವಕನೊಬ್ಬ ಹಿಂಬಾಲಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂತು. ನಾನು ಫೋನಲ್ಲಿ ಮಾತನಾಡುತ್ತಿರಬೇಕಾದರೆ ಆತ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಫೋನ್ ಕರೆ ಕಟ್ ಆದ ಬಳಿಕ ನಾನು ಆತನಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಎಂದು ಕೇಳಿದೆ. ಅದಕ್ಕೆ ಅವನು ಏನೂ ಇಲ್ಲ ಎಂದು ಹೇಳಿದ್ರೂ ಅಲ್ಲಿಂದ ಹೊರಡಲಿಲ್ಲ. ನಾನು ಅಲ್ಲಿಂದ ಹೊರಡಲನುವಾಗುತ್ತಿದ್ದಂತೆ ನನ್ನ ಮುಂದೆ ಬಂದ ಆತ ತನ್ನ ಪ್ಯಾಂಟ್ ಜಿಪ್ ಬಿಚ್ಚಿದ. ಅಲ್ಲೇ ಹಸ್ತಮೈಥುನ ಮಾಡಲು ಶುರು ಮಾಡಿದ ಎಂದು ಪ್ರೊಫೆಸರ್ ಎಎನ್‍ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ನಾನು ಅಲ್ಲಿಂದ ಓಡಿಹೋಗಬೇಕು ಎನ್ನುವಷ್ಟರಲ್ಲಿ ಆತ ಮತ್ತೆ ಬಂದು ನನ್ನನ್ನು ಹಿಡಿದುಕೊಂಡು, ನನ್ನ ದೇಹದ ಮೇಲೆಲ್ಲಾ ಕೈಯಾಡಿಸಿದ. ನಾನು ಮತ್ತೆ ಅಲ್ಲಿಂದ ಓಡಿ ಹೋಗಲು ಯತ್ನಿಸಿ ಟೆರೇಸ್‍ನ ಬಾಗಿಲ ಬಳಿ ಬಂದಾಗ ನನ್ನನ್ನು ಬೆನ್ನತ್ತಿ ಬಂದ ಆತ ಬಾಗಿಲಿನ ಚಿಲಕ ಹಾಕಿದ. ಆ ವೇಳೆ ನಾನು ಆತನನ್ನು ತಳ್ಳಿ, ಕೂಗಾಡಲು ಆರಂಭಿಸಿದೆ. ಆಗ ಆತ ಮೊಬೈಲ್ ಫೋನ್ ಕಿತ್ತು ಪಕ್ಕದ ಕಟ್ಟಡದ ಟೆರೇಸ್ ಮೇಲೆ ಹಾರಿ ಪರಾರಿಯಾಗಿದ್ದಾನೆ ಎಂದು ಪ್ರೊಫೆಸರ್ ಹೇಳಿಕೊಂಡಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *