3ನೇ ಮದ್ವೆಯಾಗಿ ಬೀಗರೂಟ ಹಾಕಿಸುತ್ತಿದ್ದ ಗಂಡನಿಗೆ ಮೊದಲ ಹೆಂಡ್ತಿಯಿಂದ ತಕ್ಕ ಶಾಸ್ತಿ

Public TV
1 Min Read

ಹಾಸನ: ಮೊದಲನೇ ಹೆಂಡತಿಗೆ ಎರಡು ಮಕ್ಕಳನ್ನು ಕೊಟ್ಟು, ಎರಡನೇ ಹೆಂಡತಿಗೆ ಸಕತ್ ಟಾರ್ಚರ್ ಕೊಟ್ಟು, ಮೂರನೇ ಮದುವೆಯಾಗಿ ಯುವತಿಯೊಂದಿಗೆ ಸಂಸಾರ ನೆಡೆಸಲು ಹೊರಟಿದ್ದ ಭಂಡ ಗಂಡನಿಗೆ ಮೊದಲನೇ ಹೆಂಡತಿ ತಕ್ಕ ಶಾಸ್ತಿ ಮಾಡಿದ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ.

ರಾಜೇಶ್ ಎಂಬಾತನೇ ಮೂರನೇ ಮದುವೆಯಾಗಿ ಸದ್ಯ ಪೊಲೀಸ್ ವಶದಲ್ಲಿರುವ ಆರೋಪಿ. 2006ರಲ್ಲಿ ಚನ್ನರಾಯಪಟ್ಟಣದ ಸೌಮ್ಯ ಎಂಬುವರೊಂದಿಗೆ ಸಪ್ತಪದಿ ತುಳಿದು 6 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ. ಬಳಿಕ ಸಂಸಾರದಲ್ಲಿ ಎದುರಾದ ಕೆಲ ಸಣ್ಣಪಟ್ಟ ಘಟನೆಗಳಿಂದ ಹೆಂಡತಿಗೆ ಕಿರುಕುಳ ಕೊಟ್ಟು ಕೊನೆಗೆ ಹೆಂಡತಿಯೇ ಬೇಡ ಎಂದು ಕೌಟುಂಬಿಕ ನ್ಯಾಯಾಲಯದ ಮೊರೆಹೋದ.

ಇಬ್ಬರೂ ಜೊತೆಯಲ್ಲಿರಲು ಕೋರ್ಟ್ ಅವಕಾಶ ಕೊಟ್ಟಿದ್ದ ಸಮಯದಲ್ಲಿಯೇ ಅರಕಲಗೂಡಿನ ಮಲ್ಲಿಪಟ್ಟಣದ ಕಲಾ ಎಂಬಾಕೆಯನ್ನು ಮದುವೆಯಾಗಿ, 10 ತಿಂಗಳು ಸಂಸಾರ ಮಾಡಿ ಆಕೆಗೂ ಕೊಡಬಾರದ ಟಾರ್ಚರ್ ಕೊಟ್ಟಿದ್ದಾನೆ ಎನ್ನಲಾಗಿದೆ.

ಕಳೆದ ನವೆಂಬರ್ 15 ರಂದು ಮತ್ತೊಂದು ಯುವತಿಯನ್ನು ಮದುವೆಯಾಗಿದ್ದ. ಈಗ ಬೀಗರೂಟ ಎಂದು ಸಂಬಂಧಿಕರನ್ನೆಲ್ಲಾ ಕರೆದು ಮಾಂಸದೂಟ ಮಾಡಿಸಿದ್ದ. ಈ ಬಗ್ಗೆ ಮೊದಲನೇ ಹೆಂಡತಿಗೆ ವಿಷಯ ತಿಳಿದು ಪ್ರಶ್ನೆ ಮಾಡಿದ್ದಕ್ಕೆ ಬೀಗರ ಔತಣಕೂಟದಲ್ಲಿಯೇ ಹೆಂಡತಿ, ನಾದಿನಿ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಪೂಲೀಸರ ಮೇಲೆಯೂ ಹಲ್ಲೆ ಮಾಡಲು ಮುಂಗಿದ್ದು, ಭಂಡ ವರನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೊರೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

https://www.youtube.com/watch?v=6EGFDTHsH_8

https://www.youtube.com/watch?v=xpZ4RApmREQ

Share This Article
Leave a Comment

Leave a Reply

Your email address will not be published. Required fields are marked *