ಬೆಂಗಳೂರು: ಪಿಎಸ್‌ಐ (PSI) ಹೊಡೆದ ಹೊಡೆತಕ್ಕೆ ಬಾಡಿಗೆದಾರನೊಬ್ಬ ಶಾಶ್ವತ ಕಿವುಡನಾಗಿರೋ ಘಟನೆ ಬೆಂಗಳೂರಿನ ಬೇಗೂರಿನಲ್ಲಿ (Begur) ನಡೆದಿದೆ.
ಬಾಡಿಗೆದಾರ ಉದಯ್ ಕುಮಾರ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪುನೀತ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪಿಎಸ್‌ಐ ಪುನೀತ್ ಹೊಡೆದ ಹೊಡೆತಕ್ಕೆ ಕಿವುಡನಾಗಿರೋ ಉದಯ್ ಬೇಗೂರು ನಿವಾಸಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಖಾಲಿ ಮಾಡುವ ವಿಚಾರಕ್ಕೆ ಬಾಡಿಗೆ ಇದ್ದ ಉದಯ್‌ಗೆ ಬೇಗೂರು ಸಬ್ ಇನ್ಸ್‌ಪೆಕ್ಟರ್ ಪುನೀತ್, ನಿನ್ನ ಮೇಲೆ ದೂರು ಕೊಡಲಾಗಿದೆ, ಠಾಣೆಗೆ ಬಾ ಎಂದು ಕರೆದು ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್ ಸಿಂಹ ಕಿಡಿ
ಪಿಎಸ್‌ಐ ಕೊಟ್ಟ ಹೊಡೆತಕ್ಕೆ ಉದಯ್‌ಗೆ ಕಿವಿ ಕೇಳಿಸದೆ ಶ್ರವಣ ದೋಷವಾಗಿದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಕಿವಿ ಕಿವುಡಾಗಿರೋದು ದೃಢವಾಗಿದೆ. ಹಲ್ಲೆಯ ಬಗ್ಗೆ ಕೋರ್ಟ್‌ನಲ್ಲಿ ಹೇಳಿದರೆ ರೌಡಿಶೀಟರ್ ಪಟ್ಟಿ ತೆರೆಯೋದಾಗಿ ಉದಯ್‌ಗೆ ಪಿಎಸ್‌ಐ ಬೆದರಿಸಿದ್ದಾನೆಂದು ಉದಯ್ ಆರೋಪಿಸಿದ್ದಾರೆ. ಕಿವುಡನಾಗಿರೋ ಉದಯ್ ಪರ ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ವಕೀಲರು ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮದ್ಯಪ್ರವೇಶ ಮಾಡಿ ಉದಯ್‌ಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಆರೋಪದಡಿ ದೂರು ಕೊಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ To ಮುಂಬೈ – ಮೆದುಳು ಜ್ವರದಿಂದ ಬಳಲುತ್ತಿದ್ದ ಯುವತಿಯ ಏರ್‌ಲಿಫ್ಟ್
ವೈದ್ಯಕೀಯ ಪರೀಕ್ಷೆ ವೇಳೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವ ವರದಿ ಕೂಡ ದೂರಿನ ಜೊತೆ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪಿಎಸ್‌ಐ ಮೇಲೆ ಕ್ರಮ ಆಗದ ಕಾರಣ ಉದಯ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಇದನ್ನೂ ಓದಿ: Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ