ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

Public TV
1 Min Read

ಕೋಲ್ಕತ್ತಾ: ವ್ಯಕ್ತಿಯೊಬ್ಬ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಊರು ತುಂಬಾ ಓಡಾಡಿದ ಘಟನೆಯೊಂದು ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

ವ್ಯಕ್ತಿಯನ್ನು ಗೌತಮ್ ಗುಚ್ಚೈತ್ (40) ಎಂದು ಗುರುತಿಸಲಾಗಿದೆ. ಗೌತಮ್‌ ತನ್ನ ಪತ್ನಿಯನ್ನು ಕೊಲೆ ಮಾಡಿದ ಬಳಿಕ ರಸ್ತಸಿಕ್ತ ಧಿರಿಸಿನಲ್ಲೇ ಚಿಸ್ತಿಪುರ ಬಸ್ ನಿಲ್ದಾಣದ ಬಳಿ ತಿರುಗಾಡಿದ್ದಾನೆ. ಜೊತೆಗೆ ಆತನ ಕೈಯಲ್ಲಿ ಪತ್ನಿ ತಲೆ ಇರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ನಂತರ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಗ್ಯಾಂಗ್ – 10 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು

ಪೊಲೀಸರ ಪ್ರಕಾರ, ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಚೂಪಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Share This Article