ಸೆಕ್ಸ್‌ಗೆ ಒಪ್ಪದ ಪತ್ನಿಯ ಶೀಲ ಶಂಕಿಸಿ ಕೈ-ಕಾಲು ಕಟ್ಟಿ ಕೊಲೆಗೈದ!

Public TV
1 Min Read

ತಿರುವನಂತಪುರಂ: ಸೆಕ್ಸ್ ಗೆ ಒಪ್ಪದ ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ ಬಂದು ಪತಿ (Husband Killed Wife) ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಎರ್ನಾಕುಲಂನ ಪೆರಿಂತಲ್ಮನ್ನಾ ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ರಫೀಕ್ (35) ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪತ್ನಿ ಫಾತಿಮಾ ಫಹ್ನಾ (30)ಳನ್ನು ಕೊಲೆ ಮಾಡಿದ್ದಾನೆ.

ರಫೀಕ್ ಶನಿವಾರ ರಾತ್ರಿ ಪತ್ನಿಯನ್ನು ಬಟ್ಟೆಯಿಂದ ಮೂಗು-ಬಾಯಿ ಕಟ್ಟಿ ಸಾಯಿಸಿದ್ದಾನೆ. ನಾಲ್ಕೂವರೆ ವರ್ಷದ ಮಗು ಜೊತೆ ದಂಪತಿ ಮಲಗಿದ್ದ ಸಂದರ್ಭದಲ್ಲಿ ಪತಿ ಈ ಕೃತ್ಯ ಎಸಗಿದ್ದಾನೆ. ಪತ್ನಿ ಸೆಕ್ಸ್ ಗೆ ಒಪ್ಪದಿದ್ದರಿಂದ ಸಿಟ್ಟುಗೊಂಡ ಪತಿ ರಫೀಕ್ ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರಬೇಕು ಎಂದು ಶಂಕಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು

ಕೊಲೆ ಮಾಡಿದ್ದು ಹೇಗೆ..?: ಪತ್ನಿಯ ತಾಯಿ ಪಕ್ಕದ ರೂಮಿನಲ್ಲಿ ಮಲಗಿದ್ದರು. ಇತ್ತ ರಫೀಕ್ ಮೊದಲು ತನ್ನ ಪತ್ನಿಯ ಕೈ-ಕಾಲುಗಳನ್ನು ಕಿಟಕಿಗೆ ಕಟ್ಟಿದ್ದಾನೆ. ಇದನ್ನು ಗಮನಿಸಿದ ಫಾತಿಮಾ ತಾಯಿ ಜೋರಾಗಿ ಕಿರುಚಿಕೊಂಡು ಸಹಾಯಕ್ಕಾ ಅಕ್ಕ-ಪಕ್ಕದ ಮನೆಯವರನ್ನು ಕರೆದಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಆಕೆ ಬದುಕುಳಿಯಲಿಲ್ಲ.

ಇತ್ತ ಪತ್ನಿ ಮೃತಪಟ್ಟ ಬೆನ್ನಲ್ಲೇ ಪತಿ ರಫೀಕ್, ಆಕೆಯ ಚಿನ್ನಾಭರಣಗಳೊಂದಿಗೆ ತಲೆಮರೆಸಿಕೊಂಡಿದ್ದಾನೆ. ನಂತರ ಆತನನ್ನು ಹುಡುಕಿ ಬಂಧಿಸಲಾಯಿತು.

 

Share This Article