ಜೈಪುರ: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಸಹೋದರಿಯನ್ನು ಮದುವೆಯಾದ ಸ್ನೇಹಿತನನ್ನು ಅಣ್ಣನೇ ಕೊಂದಿದ್ದಾನೆ.
ಮೃತದುರ್ದೈವಿ ಮನೀಶ್(27) ಎಂದು ಗುರುತಿಸಲಾಗಿದ್ದು, ಮನೀಶ್ ಶವ ಭಾನುವಾರ ಬೆಳಗ್ಗೆ ರಾಜ್ಗಢದಲ್ಲಿರುವ ಜಮೀನು ಒಂದರಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ ಮನೀಶ್ ತನ್ನ ಸ್ನೇಹಿತ ವಿಕಾಸ್ ಭೇಟಿಯಾಗಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!
ಕೆಲವು ತಿಂಗಳ ಹಿಂದೆ ನ್ಯಾಯಾಂಗ ಬಂಧನದಲ್ಲಿ ಹರಿಯಾಣ ಜೈಲಿನಲ್ಲಿದ್ದಾಗ ಮನೀಶ್ ಮತ್ತು ವಿಕಾಸ್ ಸ್ನೇಹಿತರಾದರು. ಮನೀಶ್ ಅತ್ಯಾಚಾರ ಆರೋಪಿಯಾಗಿದ್ದು, ವಿಕಾಸ್ ಪೆಟ್ರೋಲ್ ಪಂಪ್ ಲೂಟಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಂತರ ಜಮೀನಿನ ಮೂಲಕ ಹೊರಬಂದ ವಿಕಾಸ್, ಮನೀಶ್ಗೂ ಸಹ ಜಾಮೀನು ವ್ಯವಸ್ಥೆಗೊಳಿಸಿ ಜೈಲಿನಿಂದ ಬಿಡುಗಡೆಗೊಳಿದನು. ಬಳಿಕ ಮನೀಶ್ ಆಗಾಗಾ ವಿಕಾಸ್ ಮನೆಗೆ ಭೇಟಿ ನೀಡಲು ಆರಂಭಿಸಿ, ವಿಕಾಸ್ ಸಹೋದರಿ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ 10 ತಿಂಗಳ ಹಿಂದೆ ಮನೀಶ್ ವಿಕಾಸ್ ಸಹೋದರಿಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾನೆ.
ಇದರಿಂದ ಬೇಸರಗೊಂಡ ವಿಕಾಸ್ ಮನೀಶ್ಗೆ ಕೊಲೆ ಬೆದರಿಕೆಯೊಡ್ಡಿದ್ದನು. ಆದರೆ ಇದ್ಯಾವುದಕ್ಕೂ ಲೆಕ್ಕಿಸದೇ ಮನೀಶ್ ದೆಹಲಿ ಸಾರಿಗೆಯ ಕೆಲಸದಲ್ಲಿ ತೊಡಗಿದ್ದನು. ಇತ್ತೀಚೆಗೆ ಚುರುವಿಗೆ ಬಂದಿದ್ದ ಮನೀಶ್ ಶನಿವಾರ ರಾತ್ರಿ ವಿಕಾಸ್ನನ್ನು ಭೇಟಿಯಾಗಿದ್ದಾನೆ. ಈ ವೇಳೆ ವಿಕಾಸ್ ಮನೀಶ್ ಹತ್ಯೆಗೈದಿದ್ದಾನೆ. ಸದ್ಯ ಆರೋಪಿ ವಿಕಾಸ್ ತಲೆ ಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಎಸ್ಎಚ್ಒ ರಾಜ್ಗಢ ಕೃಷ್ಣ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಬರ್ಬರ ಹತ್ಯೆ