ಜ್ಯೋತಿಷಿ ಮಾತು ಕೇಳಿ ಒಂದೂವರೆ ತಿಂಗ್ಳ ಕಂದಮ್ಮನನ್ನ ಕೊಂದ ತಂದೆ

Public TV
1 Min Read

ಚಿಕ್ಕಮಗಳೂರು: ಜ್ಯೋತಿಷಿ ಮಾತು ಕೇಳಿ ತಂದೆಯೊಬ್ಬ ತನ್ನ ಒಂದೂವರೆ ತಿಂಗಳ ಹೆಣ್ಣು ಮಗುವನ್ನೇ ಕೊಂದ ಘಟನೆ ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್‍ನಲ್ಲಿ ನಡೆದಿದೆ.

ಮಂಜುನಾಥ್ (27) ಕೊಲೆ ಮಾಡಿದ ಕಟುಕ ತಂದೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿಯೊಬ್ಬ ಮಂಜುನಾಥ್‍ಗೆ ಹೇಳಿದ್ದನು. ಇದನ್ನು ಕೇಳಿದ್ದ ಮಂಜುನಾಥ್ ತನ್ನ ಒಂದೂವರೆ ತಿಂಗಳ ಮಗಳನ್ನು ಕೊಲೆ ಮಾಡಿದ್ದಾನೆ.

ಮಗುವಿನ ತಾಯಿ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಮಂಜುನಾಥ್ ತನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಮಗುವಿನ ಪಕ್ಕದಲ್ಲಿ ಮಲಗಿದ್ದನು. ಈ ವೇಳೆ ಆತ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮಗುವಿನ ಮೂಗಿನಲ್ಲಿ ರಕ್ತ ಬರುತ್ತಿದೆ ಎಂದು ಪತ್ನಿಯ ಬಳಿ ಸುಳ್ಳು ಹೇಳಿದ್ದಾನೆ.

ಮಗುವಿನ ಸ್ಥಿತಿ ನೋಡಿ ಸ್ಥಳದಲ್ಲಿದ್ದ ಅಂಗನವಾಡಿ ಶಿಕ್ಷಕರು, ವೈದ್ಯರು ಮಗುವಿನ ಮನೆಗೆ ಬಂದಿದ್ದಾರೆ. ಆಗ ಮಗುವಿನ ತಾಯಿ ಹಾಗೂ ಸ್ಥಳೀಯರು ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ತಕ್ಷಣ ಅಂಬುಲೆನ್ಸ್ ನಲ್ಲಿ ಸ್ಥಳ್ಕಕೆ ಭೇಟಿ ನೀಡಿದರು. ಆದರೆ ಅಷ್ಟರಲ್ಲಿಯೇ ಮಗು ಮೃತಪಟ್ಟಿತ್ತು.

ಮಗುವಿನ ಕುತ್ತಿಗೆಯಲ್ಲಿ ಗಂಭೀರವಾಗಿ ಗಾಯವಾಗಿರುವ ಗುರುತುಗಳು ಪತ್ತೆಯಾಗಿತ್ತು. ಆಗ ಮಗುವಿನ ತಾಯಿಗೆ ಹಾಗೂ ಸ್ಥಳೀಯರಿಗೆ ಅನುಮಾನ ಬಂದಿದೆ. ಆಗ ಜ್ಯೋತಿಷಿ ಮಾತು ಕೇಳಿ ಮಂಜುನಾಥ್ ತನ್ನ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ವಿಷಯ ಬೆಳಕಿಗೆ ಬಂತು.

ಈ ವಿಷಯ ತಿಳಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ತಂದೆ ಮಂಜುನಾಥ್‍ನನ್ನು ಪೊಲೀಸರು ಬಂಧಿಸಿದ್ದು, ಜ್ಯೋತಿಷಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *