ಚಾಕುವಿನಿಂದ ಕುತ್ತಿಗೆ ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read

ಯಾದಗಿರಿ: ಚಾಕುವಿನಿಂದ ಕುತ್ತಿಗೆಯನ್ನು ಮನಬಂದಂತೆ ಕೊಯ್ದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಾಚಗುಂಡಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮಾಚಗುಂಡಾಳ ಗ್ರಾಮದ ಶರಣಪ್ಪ ಮೇಟಿ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧನ ಸಂಖ್ಯೆ 12ಕ್ಕೆ ಏರಿಕೆ

ಗ್ರಾಮದ ಪಿಡ್ಡಣ್ಣ ಮುತ್ಯಾನ ದೇವಸ್ಥಾನದ ಹಿಂಬದಿಯಲ್ಲಿ ಪಾತಕಿಗಳಿಂದ ಕೃತ್ಯ ಎಸಗಿದ್ದು, ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಚಾಕುವನ್ನು ಕುತ್ತಿಗೆ ಮೇಲೆ ಇಟ್ಟು ಪರಾರಿಯಾಗಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಎಸ್ಪಿ ಪೃಥ್ವಿಕ ಶಂಕರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸ್ವಿಮ್ ಸೂಟ್ ಧರಿಸಿ ಹಾಟ್ ಅವತಾರ ತಾಳಿದ ಚೈತ್ರಾ ಆಚಾರ್

Share This Article