ಆಂಟಿಯನ್ನ ಲವ್ ಮಾಡಲು ಯುವಕನಿಂದ ಮಗು ಕಿಡ್ನಾಪ್!

Public TV
1 Min Read

ಮುಂಬೈ: 20 ವರ್ಷ ವಯಸ್ಸಿನ ಯುವಕ ಮಗುವಿನ ಚಿಕ್ಕಮ್ಮನನ್ನು ಪ್ರೀತಿಸುವಂತೆ ಒತ್ತಾಯಿಸಿ 3 ವರ್ಷದ ಮಗುವನ್ನು ಅಪಹರಿಸಿದ್ದ ಘಟನೆ ನಗರದಲ್ಲಿ ನಡೆದಿದೆ.

ಆರೋಪಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ನಿವಾಸಿ ಸೂರಜ್ ದಾರಾ ಸಿಂಗ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಥಾಣೆ ರೈಲು ನಿಲ್ದಾಣದ ಬಳಿ ಶುಕ್ರವಾರ ಬಂಧಿಸಿದ್ದಾರೆ. ಗುರುವಾರ ಸಂಜೆ ಉಲ್ಹಸ್ನಾಗರದಲ್ಲಿ ಸಹಾಡಾರ್ ನಗರದಿಂದ ಮೂರು ವರ್ಷದ ಮಗುವನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಲಾಗಿತ್ತು.

 

ಆರೋಪಿ ಸಿಂಗ್ ಮಗುವಿನ ಚಿಕ್ಕಮ್ಮನನ್ನು ಪ್ರೀತಿಸುತ್ತಿದ್ದನು. ಮೊದಲು ಮಗುವನ್ನು ಕಿಡ್ನಾಪ್ ಮಾಡಿ, ಬಳಿಕ ಮಗುವಿನ ಚಿಕ್ಕಮ್ಮನ್ನು ಭೇಟಿಯಾಗುವಂತೆ ಕರೆದಿದ್ದಾನೆ. ನೀನು ಒಬ್ಬಂಟಿಯಾಗಿ ಬರಬೇಕು ಇಲ್ಲವಾದರೆ ಮಗುವನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಆರೋಪಿ ಮಗುವನ್ನು ವಿಖ್ರೋಲಿಯ ಸ್ನೇಹಿತನ ಮನೆಯಲ್ಲಿ ಇರಿಸಿದ್ದನು ಎಂದು ಡಿಸಿಪಿ ದೀಪಕ್ ಡಿಯೋರಾಜ್ ಹೇಳಿದ್ದಾರೆ.

ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಿದ್ದಾರೆ. ಮೊದಲಿಗೆ ಕುರ್ಲಾದಿಂದ ವಿಖ್ರೋಳಿಗೆ ಹೋಗಿದ್ದು, ಅಲ್ಲಿಂದ ಥಾಣೆಗೆ ತೆರಳಿದ್ದಾರೆ. ಅಲ್ಲಿ ಪೊಲೀಸರು ಅಂದರೆ ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಚಿಕ್ಕಮಕ್ಕಳನ್ನು ಥಾಣೆ ನಿಲ್ದಾಣಕ್ಕೆ ಕಳುಹಿಸಿದ್ದಾರೆ. ಈ ವೇಳೆ ಆರೋಪಿ ಆಕೆಯನ್ನು ಭೇಟಿಯಾಗಲು ಅಲ್ಲಿಗೆ ಬಂದಾಗ ಬಂಧಿಸಿದ್ದಾರೆ.

ಮಗುವಿರುವ ಸ್ಥಳದ ಬಗ್ಗೆ ವಿಚಾರಣೆ ಮಾಡಿ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಆರೋಪಿ ಚಿಕ್ಕಮ್ಮನನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಅವರು ಆತನ ಪ್ರೀತಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೆ ಕಿರುಕುಳ ನೀಡಲು ಪ್ರೇಯಸಿಯ ಸಹೋದರಿಯ ಮಗುವನ್ನು ಅಪಹರಿಸಿದ್ದನು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *