ಕೂದಲು ಹಿಡಿದು ತಲಾಖ್‌ ಕೊಟ್ಟ, ಹೋಗಿ ಸಾಯಿ ಎಂದ: ಕಣ್ಣೀರಿಟ್ಟ ಮಂಗಳೂರಿನ ಮಹಿಳೆ

Public TV
2 Min Read

ಮಂಗಳೂರು: ಮುಸ್ಲಿಮ್ ಮಹಿಳೆಯರ (Muslim Women) ಗೌರವ ಉಳಿಸುವುದಕ್ಕಾಗಿ ತ್ರಿವಳಿ ತಲಾಖ್‌ಗೆ (Triple Talaq) ದೇಶದಲ್ಲಿ ನಿಷೇಧ ಹೇರಲಾಗಿದೆ. ತಲಾಖ್ ಹೇಳಿ ಮಹಿಳೆಯರನ್ನು ಬೀದಿಗೆ ತಳ್ಳಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಿದ್ದರೂ ಮಂಗಳೂರಿನ (Mangaluru) ಭೂಪ ಎರಡನೇ ಮದುವೆಯಾದ ಮಹಿಳೆಯನ್ನು ಎಂಟು ತಿಂಗಳು ಸಂಸಾರ ನಡೆಸಿ ತಲಾಖ್ ನೆಪದಲ್ಲಿ ಬೀದಿಗೆ ತಳ್ಳಿದ್ದಾನೆ.

ತ್ರಿವಳಿ ತಲಾಖ್ ಹೇಳಿ ಮುಸ್ಲಿಂ ಮಹಿಳೆಯರನ್ನು ಬೀದಿಗೆ ತಳ್ಳುವ ಕರಾಳ ಪದ್ಧತಿಯನ್ನು ಮೋದಿ ಸರ್ಕಾರ (Narendra Modi Government) 2018ರಲ್ಲೇ ನಿಷೇಧ ಮಾಡಿತ್ತು. ಆ ಮೂಲಕ ಮುಸ್ಲಿಂ ಮಹಿಳೆಯರಿಗೆ ಒಂದಷ್ಟು ಘನತೆ ಹೆಚ್ಚಿಸುವ ಕೆಲಸ ಮಾಡಲಾಗಿತ್ತು. ಆದರೆ ಮಂಗಳೂರಿನಲ್ಲಿ ತರಕಾರಿ ವ್ಯಾಪಾರಿ ಆಗಿರುವ ಮಹಮ್ಮದ್ ಹುಸೇನ್ ಎಂಬಾತ ಮೊದಲ ಪತ್ನಿಗೆ ವಿಚ್ಛೇದನ (Divorce) ಕೊಟ್ಟು ಎರಡನೇ ಮದುವೆಯಾದರೂ ತನ್ನ ಹಳೆ ಚಾಳಿ ಬಿಟ್ಟಿಲ್ಲ. ಈಗ ಎರಡನೇ ಮದುವೆಯಾದ ಮಹಿಳೆಗೆ ತ್ರಿವಳಿ ತಲಾಖ್ ನೀಡಿ ಬೀದಿಗೆ ತಳ್ಳಿದ್ದಾನೆ. ಇದನ್ನೂ ಓದಿ: ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್: SBI

ಶಬಾನಾಳಿಗೆ ಇದು ಎರಡನೇ ವಿವಾಹವಾಗಿದ್ದು, ಎರಡು ಮಕ್ಕಳನ್ನು ಹೊಂದಿದ್ದ ಈಕೆಯನ್ನು ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಎರಡು ಮಕ್ಕಳನ್ನು ಕರುಣಿಸಿ, ಬಳಿಕ ವಿಚ್ಚೇದನ ನೀಡಿದ್ದ ಹುಸೇನ್ ಎಂಟು ತಿಂಗಳ ಹಿಂದೆ ಈಕೆಯನ್ನು ಮದುವೆಯಾಗಿದ್ದು, ಈಗ ಆಕೆಯನ್ನೂ ಮನೆಯಿಂದ ಹೊರದಬ್ಬಿದ್ದಾನೆ. ಅಷ್ಟೇ ಅಲ್ಲದೇ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಶಬಾನಾ ಈಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತನ್ನಲ್ಲಿದ್ದ ಹತ್ತು ಲಕ್ಷ ರೂ. ಮೌಲ್ಯದ ಒಡವೆ, ಬಂಗಾರವನ್ನು ಪತಿ ಮಹಮ್ಮದ್ ಹುಸೇನ್ ಹೊತ್ತೊಯ್ದಿದ್ದು, ಈಗ ಮನೆಯಿಂದಲೂ ಹೊರಗೆ ಹಾಕಿದ್ದಾನೆ. ಕೂದಲು ಹಿಡಿದು ತಲಾಖ್‌ ಕೊಟ್ಟು ಹೋಗಿ ಸಾಯಿ ಎಂದು ಹೇಳಿದ್ದಾನೆ. ಹೊಟ್ಟೆಗೆ ತುಳಿದು ಎದೆಯ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆಂದು ಶಬಾನಾ ದೂರಿದ್ದಾರೆ.

 

ಪಾಂಡೇಶ್ವರ ಠಾಣೆಯಲ್ಲಿ ಆರೋಪಿ ಮಹಮ್ಮದ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕೃತ್ಯಕ್ಕೆ ಅತ್ತೆ ಜೊಹರಾ ಮತ್ತು ಮಾವ ಅಹ್ಮದ್ ಅಬ್ಬು ಸಹಕಾರ ನೀಡಿದ್ದು ಅವರ ವಿರುದ್ಧವೂ ದೂರು ನೀಡಲಾಗಿದೆ.

Share This Article