ಮಂಗಳೂರು | ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ – ರಕ್ತಸಿಕ್ತವಾಗಿ ಸಿಕ್ಕ ಶವ

Public TV
0 Min Read

ಮಂಗಳೂರು: ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಮಂಗಳೂರು ಹೊರವಲಯದ ಕುಂಪಲ ಎಂಬಲ್ಲಿ ನಡೆದಿದೆ.

ಕುಂಪಲ ನಿವಾಸಿ ದಯಾನಂದ (60) ನಾಯಿ ದಾಳಿಯಿಂದ ಸಾವಿಗೀಡಾದ ವ್ಯಕ್ತಿ. ಅವರ ಮೇಲೆ ಬೀದಿನಾಯಿ ದಾಳಿ ಮಾಡಿವೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸೋಕೋ ಟೀಮ್ ಸಹ ಪರಿಶೀಲನೆ ನಡೆಸಿದೆ. ಬೆಳಗ್ಗಿನ ಜಾವ ನಾಯಿ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share This Article