ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

Public TV
1 Min Read

ಚಿಕ್ಕಮಗಳೂರು: ಆನೆ (Elephant) ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದೆ. ಎನ್‍ಆರ್‌ಪುರ (NRPura) ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ಮಾಡಿ, ಕೊಂದು ಹಾಕಿದೆ.

ಮೃತರನ್ನು ಸುಬ್ರಾಯಗೌಡ (65) ಎಂದು ಗುರುತಿಸಲಾಗಿದೆ. 4 ದಿನದ ಅಂತರದಲ್ಲಿ ಇದು 2ನೇ ಸಾವಾಗಿದ್ದು, ಕಳೆದ ಗುರುವಾರವಾಷ್ಟೆ ಕವಿತಾ (25) ಎಂಬವರು ಆನೆ ದಾಳಿಗೆ ಬಲಿಯಾಗಿದ್ದರು. 4 ದಿನ ಕಳೆಯುವಷ್ಟರಲ್ಲಿ ಈಗ ಮತ್ತೊಂದು ಬಲಿಯಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

ಇಂದು (ಭಾನುವಾರ) ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಆನೆಗಳು ಕಾಣಿಸಿಕೊಂಡಿದ್ದವು. ಮೇಲಿಂದ ಮೇಲೆ ಆನೆ ದಾಳಿ ಪ್ರಕರಣ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.

ಆನೆ ದಾಳಿ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಾಳಿ ಮಳೆ ಅಬ್ಬರಕ್ಕೆ ಮನೆ ಮೇಲೆ ಉರುಳಿದ ಬೃಹತ್ ಮರ – ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದಿಂದ ತೆರವು

Share This Article