ಕಲಬುರಗಿ| ರೀಲ್ಸ್ ಮಾಡುತ್ತ ಟ್ರ್ಯಾಕ್ಟರ್‌ ಕೆಳಗೆ ಬಿದ್ದ ಚಾಲಕ; ಚಕ್ರಕ್ಕೆ ಸಿಲುಕಿ ಸಾವು

1 Min Read

ಕಲಬುರಗಿ: ರೀಲ್ಸ್ ಮಾಡುತ್ತ ಟ್ರ್ಯಾಕ್ಟರ್‌ ಕೆಳಗೆ ಬಿದ್ದು ಚಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

ಕಮಲಾಪುರ್ ತಾಲೂಕಿನ ಮಹಾಗಾಂವ್ ಗ್ರಾಮದ ನಿವಾಸಿ ಲೋಕೇಶ್ ಕಲ್ಲಪ್ಪ ಪೂಜಾರಿ ಮೃತ ದುರ್ದೈವಿ. ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಈ ಯುವಕ 10ನೇ ವಯಸ್ಸಿನಲ್ಲಿಯೇ ಟ್ರ‍್ಯಾಕ್ಟರ್ ಚಾಲನೆ ಮಾಡಿ ತಾಯಿಯ ಜೊತೆ ಜೀವನ ನಡೆಸುತ್ತಿದ್ದ. ಆದರೆ, ಯುವಕನಿಗೆ ಇನ್‌ಸ್ಟಾ ರೀಲ್ಸ್ ಗೀಳು ಹೆಚ್ಚಾಗಿತ್ತು. ಇದನ್ನೂ ಓದಿ: ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

ಕಳೆದ ಕೆಲ ತಿಂಗಳಿನಿಂದ ರೀಲ್ಸ್ ಮಾಡುತ್ತಿದ್ದ ಲೋಕೇಶ್ ಪೂಜಾರಿ ನಿನ್ನೆ ಸಹ ಮಹಾಗಾಂವ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಬ್ಬು ನೆಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ. ಈ ವೇಳೆ ಕೈಯಲ್ಲಿ ಮೊಬೈಲ್ ಹಿಡಿದು ಟ್ರ‍್ಯಾಕ್ಟರ್ ಚಲಾಯಿಸುತ್ತ ರೀಲ್ಸ್ ಮಾಡುತ್ತಿದ್ದ. ಆಗ ಕೈಯಲ್ಲಿದ್ದ ಮೊಬೈಲ್ ಜಾರಿ ಕೆಳಗೆ ಬಿಳುತ್ತಿದ್ದಂತೆ ಮೊಬೈಲ್ ಹಿಡಿಯಲು ಮುಂದಾಗಿದ್ದಾನೆ. ಕೆಳಗೆ ಬಿದ್ದು ಟ್ರ‍್ಯಾಕ್ಟರ್ ಚಕ್ರಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ವೇಳೆ ಅಕ್ಕಪಕ್ಕದ ಜಮೀನಿನವರು ಸ್ಥಳಕ್ಕೆ ಧಾವಿಸಿ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಕಲ್ಲಪ್ಪನ ಸಾವಿನ ಮಾಹಿತಿಯನ್ನು ನೀಡಿದ್ದಾರೆ.

ಕಲ್ಲಪ್ಪ ಸಾವಿನ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 38 ಕೋಟಿ ಮೌಲ್ಯದ ಕೊಕೇನ್ ಸೀಜ್

Share This Article