ಹೃದಯಾಘಾತದಿಂದ ಕಾರಿನಲ್ಲೇ ವ್ಯಕ್ತಿ ಸಾವು – ಕೈ ಮೇಲೆ ಗಾಯ ನೋಡಿ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

Public TV
1 Min Read

ಬೆಂಗಳೂರು: ಹೃದಯಾಘಾತದಿಂದ (Heart Attack) ಕಾರಿನಲ್ಲೇ (Car) ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಡಿಗೆಹಳ್ಳಿ (Kodigehalli) ಬ್ರಿಡ್ಜ್ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಮುತ್ಯಾಲ ನಗರದ ನಿವಾಸಿ ಅಶ್ವಿನ್ ಕುಮಾರ್ (42) ಎಂದು ಗುರುತಿಸಲಾಗಿದೆ. ಕೊಡಿಗೆಹಳ್ಳಿ ಬ್ರಿಡ್ಜ್ ಬಳಿಯ ಖಾಸಗಿ ಆಸ್ಪತ್ರೆ ಮುಂಭಾಗ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆ.

ಮನೆಯಿಂದ ಹೊರ ಬಂದಿದ್ದ ಅಶ್ವೀನ್ ಕುಮಾರ್, ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಲೊಕೇಷನ್ ಟ್ರ್ಯಾಕ್ ಮಾಡಿ ಕಾರು ಇರುವ ಸ್ಥಳಕ್ಕೆ ಬಂದ ಪೊಲೀಸರು, ಕಾರಿನ ಗ್ಲಾಸ್ ಒಡೆದು ನೋಡಿದಾಗ ಮೃತಪಟ್ಟಿರೋದು ದೃಢಪಟ್ಟಿದೆ.

ಅಶ್ವಿನ್ ಕುಮಾರ್ ಕೈ ಮೇಲೆ ಸುಟ್ಟುಗಾಯ ಇರುವ ಹಿನ್ನಲೆ, ಕುಟುಂಬಸ್ಥರಿಗೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಹಾಗೂ ಎಫ್‍ಎಸ್‍ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಾಗಿದೆ.

Share This Article