ಬೆಂಗಳೂರಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕ ವಾಹನದ ಗ್ಲಾಸ್ ಹೊಡೆದ ಪುಡಿ ರೌಡಿ!

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಆಗಾಗ್ಗೆ ಪುಡಿರೌಡಿಗಳು (Rowdy) ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರಿಂದ ಗೂಸ ಬೀಳಲಿಲ್ಲ ಅಂದ್ರೆ ಪುಂಡತನ ಮೆರೆಯೋದು ನಿಲ್ಸಲ್ಲ.

ಅದೇ ರೀತಿ ಕೆ.ಆರ್ ಪುರಂ ಮಾರ್ಕೆಟ್‌ನಲ್ಲಿಂದು (KR Puram Market) ಪುಡಿರೌಡಿ ಲಾಂಗ್‌ನಿಂದ ಸಿಕ್ಕ ಸಿಕ್ಕ ಕಾರ್‌ಗಳ ಗ್ಲಾಸ್ ಹೊಡೆದು ಹಾಕಿ ಡ್ಯಾಮೇಜ್ ಮಾಡಿದ್ದಾನೆ.‌ ಇದನ್ನೂ ಓದಿ: Mangaluru| ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಅರೆಸ್ಟ್

ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದು, ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ, ಜನರಿಗೆ ಬೆದರಿಕೆ ಹಾಕಿ ವೆಹಿಕಲ್ ಡ್ಯಾಮೇಜ್ ಮಾಡಿದ್ದಾನೆ. ಇದನ್ನೂ ಓದಿ: ವರದಕ್ಷಿಣೆ ಹಣ ತರುವಂತೆ ಪತಿ ಮನೆಯವ್ರಿಂದ ಕಿರುಕುಳ ಆರೋಪ – ಮಹಿಳೆ ಆತ್ಮಹತ್ಯೆ

ಸ್ಥಳದಲ್ಲಿದ್ದ ಸಾರ್ವಜನಿಕರು ಪುಡಿರೌಡಿಯನ್ನ ಹಿಡಿದು ಕೆ.ಆರ್ ಪುರಂ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

Share This Article