ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!

Public TV
1 Min Read

ಮಡಿಕೇರಿ: ರಸ್ತೆ ಅಪಘಾತದಿಂದ ವಿದ್ಯಾರ್ಥಿಯ ಸಾವಿಗೆ ನಾನೇ ಕಾರಣ ಎಂದು ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ (Madikeri) ಹೆರವನಾಡಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ತಮ್ಮಯ್ಯ (57) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಮಡಿಕೇರಿ ಚೈನ್ ಗೇಟ್ ಬಳಿ ಬೈಕ್ ಅಪಘಾತ ನಡೆದಿತ್ತು. ಅಪಘಾತದಲ್ಲಿ ಅಂತಿಮ ಡಿಗ್ರಿ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24) ಎಂಬಾತನ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ವೇಳೆ ಯುವಕನ ದೇಹ ಲಾರಿಗೂ ತಾಗಿದ್ದರಿಂದ ಆತ ತೀವ್ರ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

ಯುವಕನ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಕೇಳುತ್ತಲೇ ತಮ್ಮಯ್ಯರಿಗೆ ಪಶ್ಚಾತ್ತಾಪವಾಗಿದೆ. ನನ್ನಿಂದಾಗಿ ಒಬ್ಬ ಯುವಕನ ಸ್ಥಿತಿ ಹೀಗಾಯಿತು ಎಂದು ತೀವ್ರವಾಗಿ ನೊಂದಿದ್ದಾರೆ. ಅದೇ ನೋವಿನಿಂದ ತಮ್ಮಯ್ಯ ಕಾಕತಾಳಿಯ ಎಂಬಂತೆ, ಯುವಕ ಸಾವನ್ನಪ್ಪಿದ ಸಮಯದಲ್ಲೇ ನೇಣಿಗೆ ಶರಣಾಗಿದ್ದಾರೆ.

ಅಪಘಾತ ಸಂಬಂಧ ಮಡಿಕೇರಿ ಸಂಚಾರಿ ಠಾಣೆಯಲ್ಲಿ, ಆತ್ಮಹತ್ಯೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೂನಂ ಪಾಂಡೆಗೆ 100 ಕೋಟಿ ರೂ. ಮಾನನಷ್ಟ ಸಂಕಷ್ಟ

Share This Article