ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ- ವ್ಯಕ್ತಿ ಆತ್ಮಹತ್ಯೆ

By
1 Min Read

ಕೋಲಾರ: ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದ ನಿವಾಸಿ ಶ್ರೀನಿವಾಸ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸ್ನೇಹಿತರೊಬ್ಬರ ಪತ್ನಿಯ ಕುರಿತು ಶ್ರೀನಿವಾಸ್ ತಪ್ಪಾಗಿ ಮಾತಾಡಿದ್ರು ಎಂಬ ಕಾರಣಕ್ಕೆ ಹಿಗ್ಗಾಮುಗ್ಗವಾಗಿ ಥಳಿಸಲಾಗಿದೆ.

ಬುಧವಾರ ಸಂಜೆ ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ಬಳಿ ಮಂಜುಳಾ ಬಗ್ಗೆ ಶ್ರೀನಿವಾಸ್ ಮಾತನಾಡಿದ್ದರು. ಈ ವೇಳೆ ಅಶೋಕ್, ರಮೇಶ್, ಧರ್ಮಂದ್ರ, ಮಂಜು ಎಂಬವರು ಥಳಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಅಲ್ಲದೆ ಅಶೋಕ್ ಪತ್ನಿ ಮಂಜುಳಾ ಕೂಡ ಪೊರಕೆಯಿಂದ ಥಳಿಸಿದ್ದಾರೆ. ಪರಿಶಿಷ್ಟ ಜಾತಿ ಹೆಸರೇಳಿ ನಿಂದಿಸಿ, ಥಳಿಸಿದ್ದು ಆತ್ಮಹತ್ಯೆಗೆ ಕಾರಣವೆಂದು ಶ್ರೀನಿವಾಸ್ ಕುಟುಂಬಸ್ಥರು ದೂರು ನೀಡಿದ್ದಾರೆ.

ಮಾಲೂರು ಪೊಲೀಸ್ ಠಾಣೆಗೆ (Maluru Police Station) ಜಾತಿನಿಂದನೆ ಮಾಡಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್