ಚಪ್ಪಲಿ ಕಳೆದು ಹೋಗಿದ್ದಕ್ಕೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ವ್ಯಕ್ತಿ!

Public TV
1 Min Read

ಬೆಂಗಳೂರು: ಇತ್ತೀಚೆಗೆ 112 ಸಹಾಯವಾಣಿ (112 Helpline) ನಂಬರ್‌ಗೆ ಸರ್ಕಾರ ವ್ಯಾಪಕ ಪ್ರಚಾರ ಕೊಟ್ಟು, ಯಾವುದೇ ತೊಂದರೆ ಇದ್ದಲ್ಲಿಯೂ ಕರೆ ಮಾಡುವಂತೆ ಸೂಚಿಸಿತ್ತು. ಆದರೆ ಇಲ್ಲೊಬ್ಬ ಮಹಾನುಭಾವ ಮಾಡಿರೋ ಕೆಲಸ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡ ಎನ್ನಬೇಕೋ, ಅಥವಾ ಪೊಲೀಸ್ ಸಿಬ್ಬಂದಿಯ ಅಸಹಾಯಕತೆ ಎನ್ನಬೇಕೋ ಗೊತ್ತಿಲ್ಲ.

ಸಂಕಷ್ಟದಲ್ಲಿರುವವರಿಗೆ ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಅನುಕೂಲವಾಗಲಿ ಎಂದು ಚಾಲ್ತಿಯಲ್ಲಿರುವ 112 ಸಹಾಯವಾಣಿಗೆ ಕರೆ ಮಾಡಿ ಚಪ್ಪಲಿ ಕಳೆದು ಹೋಗಿದೆ, ಹುಡುಕಿಕೊಡಿ ಎಂದು ದೂರಿರುವ ಘಟನೆ ವಿಧಾನಸೌಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ನಿಯಂತ್ರಣ ಕೋಣೆಯ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಕಾರ್ ಸ್ಟ್ರೀಟ್‌ನಲ್ಲಿರುವ ಬಾಲಂಭಟ್ಟ ಹಾಲ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಹಿಂತಿರುಗಿ ಬಂದು ನೋಡಿದಾಗ ನನ್ನ ಚಪ್ಪಲಿ ಕಳೆದು ಹೋಗಿದೆ, ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ. ವಿಧಿಯಿರದೇ ಪೊಲೀಸ್ ನಿಯಂತ್ರಣ ಕೋಣೆಯ ಸಿಬ್ಬಂದಿ ಸಮೀಪದಲ್ಲಿ ಬೀಟ್‌ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ- ಹಲ್ಲೆಗೈದ ನಾಲ್ವರು ಅರೆಸ್ಟ್

ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ ದೂರುದಾರನ ಜೊತೆ ಸೇರಿ ಚಪ್ಪಲಿ ಹುಡುಕಾಡಿ ಕೊನೆಗೆ ಚಪ್ಪಲಿ ಸಿಗದ ಕಾರಣ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ. ಇದು ವ್ಯಾಪಕ ಟೀಕೆಗೆ ಕಾರಣವಾಗಿದ್ದು ಪೊಲೀಸ್ ಇಲಾಖೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳೋದು ಎಷ್ಟು ಸರಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್