ಬೆಂಗಳೂರು: ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ನಡೆದಿದೆ.
ಶಭಾನ ಭಾನು ಪತಿಯಿಂದಲೇ ಕೊಲೆಯಾದ ದುರ್ದೈವಿ. ತಬ್ರೇಜ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಕಳೆದ 20 ದಿನಗಳ ಹಿಂದೆ ಶಭಾನ ಹಾಗೂ ತಬ್ರೇಜ್ ಮದುವೆಯಾಗಿತ್ತು. ಆದ್ರೆ ಮದುವೆಯ ಬಳಿಕ ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿ ತಬ್ರೇಜ್ ಮದುವೆಗೆ ಹಾಕಿದ್ದ ಮೆಹೆಂದಿ ಮಾಸುವ ಮುನ್ನವೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಏನಿದು ಘಟನೆ: ಮೃತ ಶಭಾನ ಹಾಗೂ ತಬ್ರೇಜ್ 2013 ರಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಶಭಾನ ಮನೆಯವರು ಬೇರೊಬ್ಬ ಯುವಕನಿಗೆ ಮದುವೆ ಮಾಡಿದ್ದರು. ಆದರೆ ಪ್ರೀತಿಸಿದ ತಬ್ರೇಜ್ ಗಾಗಿ ಆಕೆ ಒಂದೇ ವಾರದಲ್ಲಿ ಪತಿಯನ್ನು ಬಿಟ್ಟು ಬಂದಿದ್ದಳು. ಬಳಿಕ 4 ವರ್ಷಗಳ ಕಾಲ ಇಬ್ಬರು ಒಂದೇ ಮನೆಯಲ್ಲಿ ಲಿವಿಂಗ್ ರಿಲಿಷೇನ್ ಸಂಬಂಧದಲ್ಲಿದ್ದರು. ಕಳೆದ 20 ದಿನಗಳ ಹಿಂದೆ ಶಭಾನ ತಬ್ರೇಜ್ ಮದುವೆಯಾಗಿದ್ದರು. ಆದರೆ ನಾಲ್ಕು ವರ್ಷದಿಂದ ಒಂದಾಗಿದ್ದ ಇಬ್ಬರ ಸಂಬಂಧ ಮದುವೆಯಾದ 20 ದಿನದಲ್ಲಿ ಮುರಿದು ಬಿದ್ದಿದೆ.
ಮದುವೆಯ ಬಳಿಕ ಶಬೀನಾ ಆಕ್ರಮ ಸಂಬಂಧ ಆರೋಪ ಮಾಡಿದ್ದ ತಬ್ರೇಜ್ ಜಗಳ ನಡೆಸುತ್ತಿದ್ದ, ಬುಧವಾರ ರಾತ್ರಿಯೂ ಇದೇ ಕಾರಣ ಜಗಳ ಆರಂಭವಾಗಿದೆ ಎನ್ನಲಾಗಿದೆ. ಈ ವೇಳೆ ಪತ್ನಿಯ ಮೇಲೆ ಕೋಪಗೊಂಡ ತಬ್ರೇಜ್ ಚಾಕುವಿನಿಂದ ಶಬೀನಾಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರ ಪೊಲೀಸರು ಶಬೀನಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿ ಪತಿ ತಬ್ರೇಜ್ ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಜೆ ಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.