3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸ ಪ್ರವೃತ್ತಿಯ ಗಂಡನೊಬ್ಬನು ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಮಾರ್ಚ್ 9 ರಂದು ನಗರದ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು 37 ವರ್ಷದ ಆರೋಪಿ ಬಾಬುವನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಏಳು ವರ್ಷದ ಹಿಂದೆ ಮೀನಾ ವಿಜಯಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದು ವಿಧಿವಶಾತ್ ಮೂರು ವರ್ಷದ ಹಿಂದೆಯೇ ಅವರ ಮೊದಲನೇಯ ಪತಿ ತೀರಿಹೋಗಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

ನಂತರ ಮೀನಾಗೆ ಬಾಬು ಪರಿಚಯವಾಗುತ್ತದೆ. ಮೀನಾ ತನ್ನ ಬಾಳು ಬಂಗಾರವಾಗುತ್ತದೆ ಅಂತ ಬಾಬುನನ್ನು ಎರಡನೇ ಮದುವೆ ಆಗಿದ್ದರು. ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ನಂತರದಲ್ಲಿ ಇವರ ದಾಂಪತ್ಯ ಜೀವನವು ಚೆನ್ನಾಗಿಯೇ ಇತ್ತು. ಆದರೆ ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನೆಲ್ಲಾ ಅವನು ಕುಡಿದು ಹಾಳು ಮಾಡುತ್ತಿದ್ದನು.

ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಮಾರ್ಚ್ 9 ರಂದು ದಂಪತಿಯ ನಡುವೆ ಜೋರಾಗಿ ಜಗಳ ನಡೆದಿದ್ದು, ಪತ್ನಿಯು ಇನ್ನೂ ದುಡ್ಡು ಕೇಳಿದರೆ ನಾನು ಮೈ ಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೆನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

ಈ ವೇಳೆ ಸಾಯುತ್ತೇನೆ ಎಂದ ಪತ್ನಿಯನ್ನು ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆ ಬಾ ಅಂತ ಅಲ್ಲಿಯೇ ಸ್ಟೌ ನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಮೀನಾರ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕೂಡಾ ಕಚ್ಚಿ ವಿಕೃತಿ ಮೆರೆದಿದ್ದಾನೆ. ಘಟನೆ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *