ಯುವತಿಯೆಂದು ಯುವಕನಿಗೆ ಅಶ್ಲೀಲ ಮೆಸೇಜ್ – ಕಾಮುಕನಿಗೆ ಬಿತ್ತು ಧರ್ಮದೇಟು

Public TV
1 Min Read

ಮಂಗಳೂರು: ಯುವತಿಯೆಂದು ಭಾವಿಸಿ ಯುವಕನಿಗೆ ಅಶ್ಲೀಲ ಮೆಸೇಜ್ ಮಾಡಿ, ತಡರಾತ್ರಿ ನಗ್ನ ವೀಡಿಯೋ ಕರೆಗೆ ಒತ್ತಾಯಿಸಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada) ಬಂಟ್ವಾಳದ(Bantwal) ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ.

ಕನ್ಯಾನದ ಪಂಜಾಜೆ ನಿವಾಸಿ ಸವಾದ್(20) ಧರ್ಮದೇಟು ತಿಂದ ಯುವಕ. ಸಾವದ್ ಅಂಗಡಿಯೊಂದರಲ್ಲಿ ವಸ್ತುವೊಂದನ್ನು ಖರೀದಿಸಿ ಹಣವಿಲ್ಲವೆಂದು ಗೂಗಲ್ ಪೇ ನಂಬರ್ ಕೇಳಿದ್ದ. ಅಂಗಡಿಯಲ್ಲಿದ್ದ ಹಿಂದೂ ಯುವತಿ ತನ್ನ ನಂಬರ್ ನೀಡದೇ, ಅಂಗಡಿಯ ಮತ್ತೋರ್ವ ಯುವಕನ ನಂಬರ್ ನೀಡಿದ್ದಳು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲೇ ಇಬ್ಬರು ಬ್ರಿಟನ್‌ ಸಂಸದರ ಬಂಧನ – ಇಸ್ರೇಲ್‌ ವಿರುದ್ಧ ಸಿಡಿದ ಯುಕೆ

ಆ ಫೋನ್ ನಂಬರ್ ಯುವತಿಯದ್ದೆಂದು ಭಾವಿಸಿ ರಾತ್ರಿ ವೇಳೆ ಸಾವದ್ ಅಶ್ಲೀಲ ಸಂದೇಶ ಕಳುಹಿಸಿದ್ದ. ಈ ವೇಳೆ ಸಹೊದ್ಯೋಗಿ ಯುವಕ ಎಲ್ಲಾ ಮೆಸೇಜ್‌ಗಳಿಗೂ ಉತ್ತರಿಸಿ ಆಟವಾಡಿಸಿದ್ದ. ತಡರಾತ್ರಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿದ್ದ ಸವಾದ್, ಬಳಿಕ ಯುವತಿಗೆ ನಗ್ನ ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೇ ನಾಳೆ ಮತ್ತೆ ಅಂಗಡಿಯತ್ತ ಬರುತ್ತೇನೆ ಎಂಬ ಸಂದೇಶವನ್ನೂ ಸವಾದ್ ಕಳುಹಿಸಿದ್ದ. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

ಮರುದಿನ ಯುವತಿಯನ್ನು ಭೇಟಿಯಾಗಲು ಐಸ್‌ಕ್ರೀಂ, ಚಾಕಲೇಟ್ ಹಿಡಿದುಕೊಂಡು ಬಂದಿದ್ದ ಸವಾದ್, ಅಂಗಡಿಗೆ ನುಗ್ಗಿ ಯುವತಿಯ ಬಳಿ ಮಾತನಾಡಲು ಮುಂದಾದಾಗ ಆಕೆ ಕಿರುಚಿದ್ದಾಳೆ. ಈ ವೇಳೆ ಮೊದಲೇ ತಯಾರಾಗಿ ನಿಂತಿದ್ದ ಹಿಂದೂ ಯುವಕರು ಸವಾದ್‌ಗೆ ಧರ್ಮದೇಟು ನೀಡಿ, ವಿಟ್ಲ ಪೊಲೀಸರಿಗೆ(Vitla Police) ಒಪ್ಪಿಸಿದ್ದಾರೆ. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ

ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸವಾದ್, ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ.

Share This Article