ಹಸಿವು ಎಂದು ಬೆಕ್ಕಿನ ಹಸಿಮಾಂಸ ತಿಂದ ಭೂಪ!

Public TV
1 Min Read

ತಿರುವನಂತಪುರಂ: ಹಸಿವು ಎಂದು ಬೆಕ್ಕಿನ ಹಸಿಮಾಂಸವನ್ನು (Raw Meat) ವ್ಯಕ್ತಿ ತಿಂದಿರುವ ಘಟನೆ ಕೇರಳದ (Kerala) ಕುಟ್ಟಿಪುರಂ ಬಸ್ ನಿಲ್ದಾಣದ ಬಳಿ ನಡೆದಿದೆ.

ಅಸ್ಸಾಂನ (Assam) ಧುಬ್ರಿ ಜೆಲ್ಲೆಯ ಮೂಲದ ವ್ಯಕ್ತಿ ಕುಟ್ಟಿಪುರಂ ಬಸ್ ನಿಲ್ದಾಣದಲ್ಲಿ (Bus Stop) ಪ್ಯಾಕ್‌ನಿಂದ ಏನೋ ತಿನ್ನುತ್ತಿದ್ದ. ಅದರಿಂದ ಬರುತ್ತಿದ್ದ ದುರ್ವಾಸನೆ ಕಂಡು ಸ್ಥಳೀಯರು ಹೋಗಿ ನೋಡಿದಾಗ ಅದು ಬೆಕ್ಕಿನ ಹಸಿಮಾಂಸ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

ವಿಷಯ ತಿಳಿದು ಆತನಿಗೆ ಆಹಾರ ತೆಗೆದುಕೊಂಡು ಬಂದ ಪೊಲೀಸರು ಆತನಿಗೆ ಆಹಾರವನ್ನು ನೀಡಿ ಪರಿಶೀಲಿಸಿದ್ದಾರೆ. ಆಗ ವ್ಯಕ್ತಿ ಕಳೆದ ನಾಲ್ಕು ದಿನಗಳಿಂದ ಊಟ ಮಾಡಿಲ್ಲ ಅದಕ್ಕಾಗಿ ಹಸಿವಿನಿಂದ ಬೆಕ್ಕಿನ ಮಾಂಸ ಸೇವಿಸಿದ್ದೇನೆ ಎಂದು ಉತ್ತರಿಸಿದ್ದಾನೆ. ಇದನ್ನ ಕೇಳಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

ಚೆನ್ನೈನಲಿದ್ದ ತನ್ನ ಸಹೋದರನ ಮನೆಯಿಂದ ವ್ಯಕ್ತಿ ಕೋಝಿಕೋಡ್‌ಗೆ ಬಂದಿದ್ದನು. ಚೆನ್ನೈನಲ್ಲಿ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದನು ಎಂದು ಆತನ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಕೋಝಿಕ್ಕೋಡ್ ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:  ಇಂದು ಮೋದಿ ಭಾಷಣ – ಬಿಜೆಪಿ ಸಂಸದರ ಹಾಜರಿ ಕಡ್ಡಾಯ

Share This Article