ಬಾಡಿಗೆ ಹಣದ ಆಸೆಗೆ ಚಿಕ್ಕಪ್ಪನ ಮಗನನ್ನೇ ಕೊಂದ

Public TV
1 Min Read

ಬೆಳಗಾವಿ: ಆಸ್ತಿ ವಿವಾದ (Property Dispute) ಹಿನ್ನೆಲೆಯಲ್ಲಿ ಚಿಕ್ಕಪ್ಪನ ಮಗನನ್ನೇ ಹತ್ಯೆಗೈದ ಘಟನೆ ಬೆಳಗಾವಿಯ (Belagavi) ಹೊಸೂರು ಬಸವಣ ಗಲ್ಲಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಅಭಿಜಿತ್ ಜಾಧವ್ ಹಾಗೂ ಆತನ ಚಿಕ್ಕಪ್ಪನ ಮಗನ ನಡುವೆ ಜಾಗದ ವಿಚಾರದಲ್ಲಿ ವಿವಾದ ಇತ್ತು. ಇದೇ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ತನ್ನ ಚಿಕ್ಕಪ್ಪನ ಮಗ ಮಿಲಿಂದ್ ಜಾಧವ್(31) ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಿಲಿಂದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

ಕುಟುಂಬಕ್ಕೆ ಸೇರಿದ್ದ ಜಾಗದಲ್ಲಿದ್ದ ಮಳಿಗೆಯನ್ನು ಬೇಕರಿ ನಡೆಸಲು ಬಾಡಿಗೆ ನೀಡಲಾಗಿತ್ತು. ಬಾಡಿಗೆ ಪಡೆಯುವ ವಿಚಾರಕ್ಕೆ ಮಿಲಿಂದ್ ಹಾಗೂ ಅಭಿಜಿತ್ ಮಧ್ಯೆ ಆಗಾಗ ಗಲಾಟೆ ಆಗುತ್ತಿತ್ತು. ಈಗ ಮಿಲಿಂದ್ ಹತ್ಯೆಯಲ್ಲಿ ಜಗಳ ಕೊನೆಗೊಂಡಿದೆ.

ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ (Shahapur Police Station) ಪ್ರಕರಣ ದಾಖಲಾಗಿದೆ. ಹತ್ಯೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್

Share This Article