ಬೆಂಗಳೂರು: ಅಪಘಾತಕ್ಕೆ ಒಳಗಾಗಿದ್ದ ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಯ ಖಾಸಗಿ ಅಂಗವನ್ನು 2 ಬಾರಿ ಮುಟ್ಟಿ ವಿಕೃತಿ ಮೆರೆದಿರುವ ಘಟನೆ ನಗರದ ಜಕ್ಕೂರು (Jakkuru) ಮುಖ್ಯರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಸೆ.7ರಂದು ರಾತ್ರಿ 11:50ರ ಸುಮಾರಿಗೆ ಯುವತಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಪಘಾತಕ್ಕೊಳಗಾಗಿದ್ದ ಶ್ವಾನವನ್ನು ಕಂಡು ಕಾರು ನಿಲ್ಲಿಸಿ, ಅದರ ರಕ್ಷಣೆಗೆ ಮುಂದಾಗಿದ್ದರು. ಇದೇ ಸಮಯಕ್ಕೆ ಬೈಕ್‌ನಲ್ಲಿ ಬಂದ ಆರೋಪಿ ಯುವತಿಯ ಖಾಸಗಿ ಅಂಗವನ್ನು ಮುಟ್ಟಿ ಹೋಗಿದ್ದಾನೆ.ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಹೆಚ್ಚಿದ ಸರಗಳ್ಳರ ಅಟ್ಟಹಾಸ – ಕುತ್ತಿಗೆಗೆ ಲಾಂಗ್ ಇಟ್ಟು 55 ಗ್ರಾಂ ಚಿನ್ನ ಕಳ್ಳತನ
ಶ್ವಾನವನ್ನು ರಕ್ಷಿಸಿದ ಯುವತಿ ಪೆಟ್ರೋಲ್ ಬಂಕ್‌ವೊಂದರ ಬಳಿ ಕೈತೊಳೆಯುತ್ತಿದ್ದರು. ಈ ವೇಳೆ ಪುನಃ ಬಂದ ಆಸಾಮಿ ಮತ್ತೆ ಖಾಸಗಿ ಅಂಗವನ್ನು ಮುಟ್ಟಿ, ವಿಕೃತಿ ಮೆರೆದು ಪರಾರಿಯಾಗಿದ್ದಾನೆ.
ಈ ಸಂಬಂಧ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ (Amruthahalli Police Station) ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: 75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್ ಸುಟ್ಟು ಕರಕಲು