ವಿಡಿಯೋ: ಪ್ರಜ್ಞಾಹೀನಳಾಗಿ ರಸ್ತೆಯಲ್ಲಿ ಬಿದ್ದ ಮಹಿಳೆಗೆ ಒದ್ದು ಕ್ರೌರ್ಯ ಮೆರೆದ ವ್ಯಕ್ತಿ

Public TV
1 Min Read

ಬರ್ಮಿಂಗ್‍ಹ್ಯಾಮ್: ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಹಿಳೆಯೊಬ್ಬರ ತಲೆಗೆ ಕಾಲಿನಿಂದ ಒದ್ದು ಓರ್ವನೊಬ್ಬ ಕ್ರೌರ್ಯವನ್ನು ಮರೆದಿರುವ ಘಟನೆ ಇಂಗ್ಲೆಂಡ್ ನ ಬರ್ಮಿಂಗ್‍ಹ್ಯಾಮ್ ನಲ್ಲಿ ನಡೆದಿದೆ.

ಮಹಿಳೆಯೊಬ್ಬರು ನಗರದ ಟೆಸ್ಕೋ ಸೂಪರ್ ಮಾರ್ಕೆಟ್ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮಹಿಳೆಗೆ ಆ ವೇಳೆ ಸಹಾಯದ ಅವಶ್ಯಕತೆಯಿದ್ದು, ಆದರೆ ಅಲ್ಲಿಗೆ ಬಂದ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ತಲೆಗೆ ಒದ್ದು ಹೋಗಿದ್ದಾನೆ. ಮೊದಲೇ ನಿತ್ರಾಣಗೊಂಡಿದ್ದ ಮಹಿಳೆ ಮತ್ತಷ್ಟು ಅಸ್ವಸ್ತಗೊಂಡಿದ್ದಾರೆ. ಕೂಡಲೇ ಹಿಂಬದಿಯಿಂದ ಮತ್ತೊಬ್ಬ ವ್ಯಕ್ತಿ ಮಹಿಳೆಯನ್ನು ಮೇಲೆಕ್ಕೆತ್ತಲು ಪ್ರಯತ್ನಿಸಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು ಬ್ರಿಮ್ಜ್ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಆದ ಒಂದು ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ಶೇರ್ ಆಗಿದೆ. ವಿಡಿಯೋ ನೋಡಿದ ನೋಡುಗರು ಮಹಿಳೆಗೆ ಸಹಾಯ ಮಾಡುವ ಬದಲು ಅಹಂಕಾರ ತೋರಿಸಿದ ವ್ಯಕ್ತಿಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು 45 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲು ಹೆಚ್ಚು ಸಹಕಾರಿ ಆಗಿದೆ. ನಮಗೆ ವಿಡಿಯೋ ತಲುಪಿದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇನ್ನೂ ಹಲ್ಲೆಗೊಳಗಾದ ಮಹಿಳೆಯ ಬಗ್ಗೆ ಇದೂವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ನಾವು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದೇವೆ ಎಂದು ವೆಸ್ಟ್ ಮಿಡ್‍ಲ್ಯಾಂಡ್‍ನ ಪೊಲೀಸ್ ಅಧಿಕಾರಿ ಇಫ್ತಿ ಅಹ್ಮದ್ ತಿಳಿಸಿದ್ದಾರೆ.

https://www.youtube.com/watch?v=lguoWL6XMNI

Share This Article
Leave a Comment

Leave a Reply

Your email address will not be published. Required fields are marked *