ಪ್ರಿಯತಮೆಯ ಬೆತ್ತಲೆ ಫೋಟೋ ಸ್ನೇಹಿತರೊಂದಿಗೆ ಹಂಚಿಕೊಳ್ತಿದ್ದ ವಿಕೃತ ಕಾಮಿ ಅಂದರ್

Public TV
2 Min Read

ಬೆಂಗಳೂರು: ಅವರಿಬ್ಬರದ್ದು ಸರಿಸುಮಾರು 10 ವರ್ಷದ ಪ್ರೀತಿ. ಇನ್ನೇನು ಮದುವೆಯ ಖುಷಿಯಲ್ಲಿದ್ದ ಆ ಯುವತಿಗೆ ಶಾಕ್ ನೀಡಿತ್ತು ಅದೊಂದು ಫೋಟೋ. ಫೋಟೋ ಬೆನ್ನತ್ತಿದ್ದ ಪೊಲೀಸರು ಆ ಕೇಸ್‌ಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಪ್ರಿಯತಮೆಯ ಬೆತ್ತಲೆ ಫೋಟೋಗಳನ್ನು (Nude Photo) ಸ್ನೇಹಿತರೊಂದಿಗೆ ಹಂಚಿಕೊಂಡು ವಿಕೃತ ಆನಂದ ಪಡ್ತಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ತಮಿಳುನಾಡು ಮೂಲದ ಆ ಯುವಕ-ಯುವತಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಿಕ್ಷಣ ಮುಗಿದ ತಕ್ಷಣ ಮದುವೆ ಆಗೋ ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲಿ ಯುವತಿಯ ಬೆತ್ತಲೆ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದ ಯುವತಿ ಪ್ರೀಯಕರನಿಗೆ ವಿಷಯ ಮುಟ್ಟಿಸಿದಳು. ಹೀಗೆಲ್ಲಾ ಆಗಿದ್ಯಾ ನಡೀ ಪೊಲೀಸರಿಗೆ ದೂರು ನೀಡೋಣ ಎಂದು ತಾನೇ ಮುಂದೆ ನಿಂತು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಯುವತಿಯ ಪ್ರಿಯಕರನೇ ಫೋಟೋ ಲೀಕ್ ಮಾಡಿರೋದು ಪತ್ತೆಯಾಗಿದೆ.

ಪೊಲೀಸರ ಅತಿಥಿಯಾಗಿರುವ ಆರೋಪಿ ಸಂಜಯ್ ನಗರದ ಖಾಸಗಿ ಕಾಲೇಜಿನಲ್ಲಿ ಬಿಇ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದ. ಈ ಜೋಡಿ ಮದುವೆಯಾಗುವುದಕ್ಕೂ ಮೊದಲೇ ದೈಹಿಕ ಸಂಬಂಧವನ್ನೂ ಬೆಳೆಸಿದ್ದರು. ಈ ವೇಳೆ ತೆಗೆದುಕೊಂಡ ಬೆತ್ತಲೆ ಫೋಟೋಗಳನ್ನು ಪ್ರಿಯಕರ ಸಂಜಯ್ ಟೆಲಿಗ್ರಾಂನ ಸ್ನೇಹಿತರ ಗ್ರೂಪ್‌ನಲ್ಲಿ ಶೇರ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಪ್ರಿಯತಮೆ ಸೇರಿದಂತೆ ಆಕೆಯ ಸ್ನೇಹಿತರು, ಪರಿಚಿತ ಯುವತಿಯರ ಫೋಟೋಗಳನ್ನು ಕೂಡಾ ಬೆತ್ತಲೆಯಾಗಿ ನೋಡೋಕೆ ಅಂತಲೇ, ಬಾಟ್ ಅನ್ನೋ ಆ್ಯಪ್ ಕಂಡು ಹಿಡಿದಿದ್ದ. ಆ ಆ್ಯಪ್‌ನಲ್ಲಿ ಯಾವುದೇ ಯುವತಿಯ ಫೋಟೋ ಅಪ್ಲೋಡ್ ಮಾಡಿದರೂ ಅದು ಬೆತ್ತಲೆಯಾಗಿ ತೋರಿಸುತ್ತಿತ್ತು. ಅದನ್ನು ನೋಡಿ ಸಂಜಯ್ ವಿಕೃತ ಖುಷಿಪಡ್ತಿದ್ದ. ಇದನ್ನೂ ಓದಿ: ಇದ್ದಕ್ಕಿದ್ದಂತೆ ಮುಂದೆ ಚಲಿಸಿ, ಧಗಧಗನೆ ಹೊತ್ತಿಕೊಂಡ ಅಂಬುಲೆನ್ಸ್‌!

ಈ ಎಲ್ಲಾ ವಿಚಾರಗಳು ತನಿಖೆಯಲ್ಲಿ ಗೊತ್ತಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಚೈತ್ರಾ & ಗ್ಯಾಂಗ್‍ನಿಂದ ಟಿಕೆಟ್ ವಂಚನೆ ಪ್ರಕರಣ- ಗೋವಿಂದ ಬಾಬು ಪೂಜಾರಿ ಹೊಸ ಹೈಡ್ರಾಮಾ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್