ಲಿವ್ ಇನ್ ಪಾರ್ಟ್ನರ್‌ನ ಕೊಂದು ಕಬೋರ್ಡ್‌ನಲ್ಲಿ ತುಂಬಿಸಿಟ್ಟ!

Public TV
1 Min Read

ನವ ದೆಹಲಿ: ತನ್ನ ಲಿವ್ ಇನ್ ಪಾರ್ಟ್ನರ್‌ನ ಕೊಂದು ಆಕೆಯ ದೇಹವನ್ನು ಕಬೋರ್ಡ್‌ ನಲ್ಲಿ (Almirah) ತುಂಬಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ವಿಪಾಲ್ ಟೈಲರ್ ಎಂದು ಗುರುತಿಸಲಾಗಿದ್ದು, ಈತನನ್ನು ರಾಜಸ್ಥಾನದಿಂದ ಬಂಧಿಸಲಾಗಿದೆ. ಬಳಿಕ ಅಲ್ಲಿಂದ ದೆಹಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಳ ತಂದೆ ತನ್ನ 26 ವರ್ಷದ ಮಗಳನ್ನು ಸಂಪರ್ಕ ಮಾಡಲು ಹಲವು ದಿನಗಳಿಂದ ಪ್ರಯತ್ನಿಸಿದ್ದಾರೆ. ಆದರೆ ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಮರುದಿನವೇ ಕೊಲೆ ವಿಚಾರ ಬೆಳಕಿಗೆ ಬಂದಿದೆ.

ಏಪ್ರಿಲ್ 3 ರಂದು ಮಹಿಳೆಯ ತಂದೆ ರಾತ್ರಿ 10.40 ರಸುಮಾರಿಗೆ ಪಿಸಿಆರ್ ಗೆ ಕರೆ ಮಾಡಿದರು. ಈ ವೇಳೆ ತನ್ನ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಆಕೆಯ ಕೊಲೆಯಾಗಿದೆಯೇ ಎಂಬುದಾಗಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದರು. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರ ತಂಡವು ತನಿಖೆಗೆ ಇಳಿಯಿತು.

ಮೃತಳ ತಂದೆಯ ಅನುಮಾನದಂತೆ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಲಿನ್‌- ಇನ್-‌ ಪಾರ್ಟ್ನರ್‌ ಜೊತೆ ವಾಸವಾಗಿದ್ದ ಮನೆಯೊಂದಕ್ಕೆ ತನಿಖೆಗೆ ತೆರಳಿತ್ತು. ಈ ವೇಳೆ ಮಹಿಳೆಯ ಶವವನ್ನು ಅಲ್ಮೇರಾದಲ್ಲಿ ತುಂಬಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಆಕೆಯ ಲಿವ್-ಇನ್- ಪಾರ್ಟ್ನರ್‌ (Live In Partner) ಆಕೆಯನ್ನು ಕೊಂದಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article