ಮುಂಬೈ: ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದ ಪತ್ನಿಯನ್ನು ತನ್ನ ಕಾರಿನಲ್ಲೇ ಆಕೆಯನ್ನು ಪತಿ ಬಿಟ್ಟು ಬಂದ ಘಟನೆ ಮಹಾರಾಷ್ಟ್ರದ ವಾಜರೆಯಲ್ಲಿರುವ ತಪೋಘಾಮ್ ನಲ್ಲಿ ನಡೆದಿದೆ.
ರುಕ್ಮಣಿ ವಿಜಯ್(22) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ರುಕ್ಮಣಿ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತನ್ನ ಪತಿ ವಿಜಯ್ ಬಿರೂ ಬಳಿ ಹೇಳಿದ್ದಾಳೆ. ಪತ್ನಿ ಮಾತನ್ನು ಕೇಳಿದ ವಿಜಯ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾಗುವಂತೆ ಮಾಡಿದ್ದಾನೆ.
ಸದ್ಯ ಪತಿ ವಿಜಯ್ ವಿರುದ್ಧ ರುಕ್ಮಣಿ ತಂದೆ ವಿಠಲ್ ಸರ್ವಾಡೆ ಅವರು ಲಾತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು 27 ವರ್ಷದ ವಿಜಯ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ವಿಜಯ್ ನನ್ನ ಮಗಳು ರುಕ್ಮಣಿ ಶೀಲ ಶಂಕಿಸುತ್ತಿದ್ದನು. ಆತ ನನ್ನ ಮಗಳ ಮೇಲೆ ಅನುಮಾನಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ರುಕ್ಮಣಿ ತಂದೆ ವಿಠಲ್ ಸರ್ವಾಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಜಯ್ ಹಾಗೂ ರುಕ್ಮಣಿ 2016ರಂದು ಮದುವೆಯಾಗಿದ್ದರು. ಮದುವೆಯಾಗಿ 2 ವರ್ಷಗಳ ನಂತರ 11 ಜೂನ್‍ರಂದು ರುಕ್ಮಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ವಿಜಯ್ ವಿರುದ್ಧ 498, 306, 323 ಹಾಗೂ 504 ಕೇಸನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.